ADVERTISEMENT

ವೈರಲ್‌ ಆಯ್ತು ಸ್ಕೈಡೈವಿಂಗ್‌ನಲ್ಲಿ ಬರ್ಗರ್‌ ತಿಂದ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2022, 7:11 IST
Last Updated 13 ಅಕ್ಟೋಬರ್ 2022, 7:11 IST
ಮೆಕೆನ ಇನ್‌ಸ್ಟಾಗ್ರಾಂ ಚಿತ್ರ
ಮೆಕೆನ ಇನ್‌ಸ್ಟಾಗ್ರಾಂ ಚಿತ್ರ   

ಇತ್ತೀಚಿನ ದಿನಗಳಲ್ಲಿ ಸ್ಕೈಡೈವಿಂಗ್‌ ಎಲ್ಲರ ಕನಸಿನ ಸಾಹಸವಾಗಿದೆ. ಮೈಸೂರಿನ ಸ್ಕೈಡೈವಿಂಗ್‌ ತಾಣ ಭಾರತದಲ್ಲೇ ಜನಪ್ರಿಯವಾಗಿದೆ. ಸ್ಕೈಡೈವಿಂಗ್‌ ಮಾಡುವುದೇ ಒಂದು ಸಾಹಸವಾದರೆ, ಅದರೊಳಗೆ ಒಂದಷ್ಟು ಉಪ ಸಾಹಸಗಳು ಇಂದು ಸಾಮಾನ್ಯವಾಗಿಬಿಟ್ಟಿದೆ.

ವಿದೇಶಿ ಇನ್‌ಸ್ಟಾಗ್ರಾಂ ವಿಡಿಯೊ ಕ್ರಿಯೇಟರ್‌ ಮೆಕೆನ ನೈಪ್‌ ಸ್ಕೈ ಡೈವಿಂಗ್ ಮಾಡುವಾಗ 10 ಸಾವಿರ ಅಡಿ ಎತ್ತರದಲ್ಲಿ ಬರ್ಗರ್‌ ತಿನ್ನುತ್ತಿರುವುದನ್ನು ವಿಡಿಯೊ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪ್ಯಾರಾಚೂಟ್‌ ಧರಿಸಿ ಸ್ಕೈಡೈವ್‌ ಮಾಡುತ್ತಿರುವ ಮೆಕೆನ ಬರ್ಗರ್‌ ಪ್ಯಾಕ್‌ ತೆರೆದು ತಿನ್ನುವ ವಿಡಿಯೊವನ್ನು ಹರಿಯಬಿಟ್ಟಿದ್ದಾರೆ. ಜೊತೆಗೆ ತಾನು ಎಷ್ಟು ಎತ್ತರದಲ್ಲಿರುವೆ ಎಂಬುದನ್ನು ನೋಡುಗರಿಗೆ ತೋರಿಸುತ್ತಾರೆ. ಬರ್ಗರ್‌ 10000 ಅಡಿ ಎತ್ತರದಲ್ಲಿ ಬಲುರುಚಿ ಎಂಬಂತೆ ಬರೆದುಕೊಂಡಿದ್ದಾರೆ.

ADVERTISEMENT

ಇದಕ್ಕೆ ನೆಟ್ಟಿಗರು ಅಚ್ಚರಿ ಎಂಬಂತೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರು ತಿಂದಿರುವ ಬರ್ಗರ್‌ ಕಂಪನಿ ಕುರಿತು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆಮ್ಲಜನಕದ ಕೊರತೆ ಇರುವುದರಿಂದ ಬರ್ಗರ್‌ ರುಚಿಯಾಗಿರಬಹುದು ಎಂದು ಕೆಲವರು ಕಾಲೆಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.