ಬೀಜಿಂಗ್: ಕಾಲುವೆ ನೀರಿನಲ್ಲಿ ಸಿಲುಕಿ ಮೇಲಕ್ಕೆ ಬರಲು ಒದಾಡುತ್ತಿದ್ದ ನಾಯಿ ಮರಿಯನ್ನು ರಕ್ಷಣೆ ಮಾಡಿದ ಇಬ್ಬರು ಯುವಕರುಚೀನಾದಲ್ಲಿ ಸೂಪರ್ ಹಿರೋಗಳಾಗಿದ್ದಾರೆ.
ಯುವಕನೊಬ್ಬ ಕಾಲುವೆ ದಡದಲ್ಲಿ ನಿಂತು ಕೈ ಚಾಚಿ ನಾಯಿ ಮರಿಯನ್ನು ರಕ್ಷಣೆ ಮಾಡಿದ್ದಾನೆ. ಆ ಯುವಕನಿಗೆ ಮತ್ತೊಬ್ಬ ಯುವಕ ಸಹಾಯ ಮಾಡಿದ್ದಾನೆ. ಯುವಕರು ನಾಯಿ ಮರಿಯನ್ನು ರಕ್ಷಣೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದೆ.
ಚೀನಾದ ನ್ಯೂಸ್ ವೆಬ್‌ಸೈಟ್‌ಗಳು ಮತ್ತು ಸುದ್ದಿ ವಾಹಿನಿಗಳಲ್ಲೂ ಈ ವಿಡಿಯೊ ವೈರಲ್ ಆಗಿದೆ. ಮೊದಲು ಪೀಪಲ್ ಡೈಲಿ ನೂಸ್ ವೆಬ್‌ಸೈಟ್ ಈ ವಿಡಿಯೊವನ್ನು ಪ್ರಕಟಿಸಿತ್ತು.
ಜೀವದ ಹಂಗು ತೊರೆದು ಯುವಕರು ನಾಯಿ ಮರಿಯನ್ನು ರಕ್ಷಣೆ ಮಾಡಿರುವುದಕ್ಕೆ ಜನರುಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.