ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ಪ್ರಾಡಾ
ಚಿತ್ರ ಕೃಪೆ:prada ಇನ್‌ಸ್ಟಾಗ್ರಾಂ
ನವದೆಹಲಿ: ಭಾರತದಲ್ಲಿ ಕೊಲ್ಹಾಪುರಿ ಚಪ್ಪಲಿಗಳ ಬಳಕೆ ಸಾಮಾನ್ಯವಾಗಿದೆ. ಆದರೆ ವಿದೇಶಿ ಕಂಪನಿಯೊಂದು ಥೇಟ್ ಇದೇ ವಿನ್ಯಾಸದ ಚಪ್ಪಲಿಯನ್ನು ಮಾರುಕಟ್ಟೆಗೆ ತಂದಿದ್ದು, ಬರೋಬ್ಬರಿ ₹1ಲಕ್ಷಕ್ಕೆ ಮಾರುತ್ತಿದೆ.
ಹೌದು, ಇಟಲಿಯ ಪ್ರಾಡಾ (Prada) ಎನ್ನುವ ಕಂಪನಿಯೊಂದು ಕೊಲ್ಹಾಪುರಿ ಚಪ್ಪಲಿಯನ್ನೇ ನೆನಪಿಸುವಂತಹ ವಿನ್ಯಾಸದ ಚಪ್ಪಲಿಯನ್ನು ತಯಾರಿಸಿದೆ. ಆದರೆ ಈ ಚಪ್ಪಲಿಯ ವಿನ್ಯಾಸಕ್ಕೆ ಕಂಪನಿ ಭಾರತಕ್ಕೆ ಯಾವುದೇ ರೀತಿಯ ಕ್ರೆಡಿಟ್ ಕೊಟ್ಟಿಲ್ಲ. ಇದಲ್ಲದೆ ಎನ್‌ಡಿಟಿ ವರದಿ ಪ್ರಕಾರ ಈ ಚಪ್ಪಲಿಗಳನ್ನು ₹1.2ಲಕ್ಷಕ್ಕೆ ಮಾರಾಟ ಮಾಡುತ್ತಿದೆ. ಇದು ಭಾರತೀಯರನ್ನು ಕೆರಳಿಸಿದೆ.
ಐಷಾರಾಮಿ ಬ್ರ್ಯಾಂಡ್ ಆದ ಪ್ರಾಡಾ, ಈ ಚಪ್ಪಲಿಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದನ್ನು ಗಮನಿಸಿದ ನೆಟ್ಟಿಗರು, ಪ್ರಾಡಾ ಭಾರತೀಯ ಶೈಲಿಯ ಚಪ್ಪಲಿ ವಿನ್ಯಾಸವನ್ನು ನಕಲು ಮಾಡಿದೆ, ಭಾರತಕ್ಕೆ ಯಾವುದೇ ಕ್ರೆಡಿಟ್‌ನ್ನೂ ಕೊಟ್ಟಲ್ಲ ಎಂದು ಕಿಡಿಕಾರಿದ್ದಾರೆ. ಇನ್ನೂ ಹಲವರು ‘ಚಪ್ಪಲ್ ಚೋರ್’ ಎಂದು ಟೀಕಿಸಿದ್ದಾರೆ.
ಬೆಲೆಗಳು ಏರುತ್ತಿದ್ದಂತೆ ಫ್ಯಾಷನ್‌ನಿಂದ ಹಿಂದೆ ಸರಿದಿರುವ ಖರೀದಿದಾರರಲ್ಲಿ ಆಸಕ್ತಿಯನ್ನು ಹುಟ್ಟಿಸಲು, ಐಷಾರಾಮಿ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಹೊಸ ವಿನ್ಯಾಸಕ್ಕೆ ಮೊರೆಹೋಗಿವೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.