
ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ನಿಗಮದ ಚಾಲಕನೊಬ್ಬ ತನ್ನ ಮನೆಯ ಛಾವಣಿಯ ಮೇಲೆ ಸರ್ಕಾರಿ ಬಸ್ಸಿನ ರಚನೆ ರಚಿಸಿ ಗಮನ ಸೆಳೆದಿದ್ದಾರೆ.
2016ರಿಂದ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ್ ಅವರ ಮನೆ ಮೇಲೆ ಈ ಸರ್ಕಾರಿ ಬಸ್‌ನ ಪ್ರತಿಕೃತಿ ರಚನೆಯಾಗಿದೆ.
ಬಸ್‌ನ ರಚನೆ, ಒಳಗಿನ ಆಸನಗಳು, ಸ್ಟೇರಿಂಗ್, ಚಕ್ರಗಳು ಸರ್ಕಾರಿ ಬಸ್‌ನ ಪ್ರತಿಬಿಂಬದಂತಿದೆ. ದೂರದಿಂದ ನೋಡಿದಾಗ ಸಾರಿಗೆ ನಿಗಮದ ಬಸ್‌ನಂತೆಯೇ ಕಾಣುತ್ತದೆ. ಈ ವಿಶಿಷ್ಟ ಬಸ್ ಈಗ ಇಡೀ ಜಿಲ್ಲೆಯ ಆಕರ್ಷಣೆಯ ಕೇಂದ್ರವಾಗಿದೆ.
‘ನಾನು ರಜೆಯ ಸಮಯದಲ್ಲಿ ಮನೆಯಲ್ಲಿದ್ದಾಗಲೆಲ್ಲಾ, ಈ ಬಸ್‌ನಲ್ಲಿ ಕುಳಿತು, ಊಟ ಮಾಡಿ ಸಮಯ ಕಳೆಯುತ್ತೇನೆ. ಇದು ಕೇವಲ ಒಂದು ರಚನೆಯಲ್ಲ, ಬದಲಾಗಿ ಕಠಿಣ ಪರಿಶ್ರಮ ಮತ್ತು ಗುರುತಿನ ಸಂಕೇತವಾಗಿದೆ’ ಎಂದು ಶ್ರೀಧರ್ ಹೇಳಿದ್ದಾರೆ.
‘ಸಾರಿಗೆ ನಿಗಮಕ್ಕೆ ಚಾಲಕನಾಗಿ ಸೇರಿದ ನಂತರ ಜೀವನ ಸಂಪೂರ್ಣವಾಗಿ ಬದಲಾಗಿದೆ. ಸರ್ಕಾರಿ ಬಸ್ ಚಾಲಕನಾಗಿ ಇರುವುದು ಕೇವಲ ಉದ್ಯೋಗವಲ್ಲ ಮಾತ್ರಲ್ಲ. ನನ್ನಿಷ್ಟದ ಕೆಲಸವೂ ಹೌದು. ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರೂ ಈ ಬಸ್‌ಅನ್ನು ನೋಡಲು ಬರುತ್ತಿದ್ದಾರೆ‘ ಎಂದು ಎಂದು ಶ್ರೀಧರ್ ಖುಷಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.