ಹೀನಾ
ಬೆಂಗಳೂರು: ಪಾಕಿಸ್ತಾನದ ಕರಾಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅವ್ಯವಸ್ಥೆಯನ್ನು ಪಾಕ್‌ನ ಜನಪ್ರಿಯ ನಟಿಯೊಬ್ಬರು ಕನ್ನಡಿ ಹಿಡಿದಿದ್ದಾರೆ.
ಹೀನಾ ಬಯಾತ್ ಎನ್ನುವ (Hina Khawaja Bayat) ನಟಿ ನಿರೂಪಕಿ ಕರಾಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ನಿಂತು ನೀರು ಬರುತ್ತಿಲ್ಲ ಎಂದು ಪಾಕ್ ಆಡಳಿತಗಾರರನ್ನು ಪ್ರಶ್ನಿಸಿ ಸೆಲ್ಫಿ ವಿಡಿಯೊ ಮಾಡಿದ್ದಾರೆ.
ನಾವು ಪಾಕಿಸ್ತಾನದ ಸಾಧನೆಗಳನ್ನು ಸಂಭ್ರಮಿಸಬೇಕಿತ್ತು. ಆದರೆ, ನಮ್ಮ ವಿಮಾನ ನಿಲ್ದಾಣಗಳು, ನಮ್ಮ ಸಂಸ್ಥೆಗಳು ಮತ್ತು ನಮ್ಮ ವ್ಯವಸ್ಥೆಗಳು ಏಕೆ ಈ ಮಟ್ಟಿಗೆ ಹದಗೆಟ್ಟಿವೆ? ಎಂದು ಪ್ರಶ್ನಿಸಿದ್ದಾರೆ.
ದೇಶದ ನಾಯಕರು ಹೊಸ ಹೊಸ ಯೋಜನೆಗಳನ್ನು ಆರಂಭಿಸುತ್ತೇವೆ ಎಂದು ಹೇಳುತ್ತಾರೆ. ಮೊದಲು ಶೌಚಾಲಯಗಳಿಗೆ ನೀರು ಕೊಡಿ ಸ್ವಾಮಿ ಎಂದು ಒತ್ತಾಯಿಸಿದ್ದಾರೆ. ಇವರ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ್ದು ಪಾಕ್ ದುರಾಡಳಿತವನ್ನು ನಟಿ ಬಯಲು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.