ADVERTISEMENT

ವಿಡಿಯೊ: ಪ್ರವಾಸಿಗರಿದ್ದ ಕಾರನ್ನು ಕಚ್ಚಿ ಎಳೆದ ಹುಲಿರಾಯ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2022, 16:06 IST
Last Updated 1 ಜನವರಿ 2022, 16:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರವಾಸಿಗರಿಂದ ತುಂಬಿದ ಕ್ಸೈಲೋ ಎಸ್‌ಯುವಿ ಕಾರನ್ನು ಹುಲಿಯೊಂದು ಕಚ್ಚಿ, ಹಿಂದಕ್ಕೆ ಎಳೆಯುವ ಮೂಲಕ ವ್ಯಾರ್ಘನ ಶಕ್ತಿಯೆಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.

ಕಾರಿನ ಹಿಂಬದಿಯ ಬಂಪರ್‌ಅನ್ನು ಬಲವಾಗಿ ಕಚ್ಚಿ ಹಿಡಿದೆಳೆಯುತ್ತಿರುವ ಹುಲಿಯ ವಿಡಿಯೊವನ್ನು ಮಹೀಂದ್ರ ಸಂಸ್ಥೆ ಮುಖ್ಯಸ್ಥ, ಉದ್ಯಮಿ ಆನಂದ್‌ ಮಹೀಂದ್ರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತಮಿಳುನಾಡಿನ ತೆಪ್ಪಕ್ಕಾಡುವಿನ ಊಟಿ-ಮೈಸೂರು ರಸ್ತೆಯ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ.

1 ನಿಮಿಷ 30 ಸೆಕೆಂಡ್‌ ಇರುವ ವಿಡಿಯೊದಲ್ಲಿ ಮಹೀಂದ್ರ ಕ್ಸೈಲೋ ಎಸ್‌ಯುವಿ ಕಾರಿನ ಒಳಗೆ ಪ್ರವಾಸಿಗರು ಕುಳಿತಿರುವುದು ಇದೆ. ಕಾರಿನ ಹಿಂಬದಿಯ ಬಂಪರ್‌ಅನ್ನು ಕಚ್ಚುತ್ತಿರುವ ಹುಲಿಯೊಂದು, ಕೊನೆಗೆ ಕಾರನ್ನೇ ಹಿಂದಕ್ಕೆ ಎಳೆಯುತ್ತಿರುವ ದೃಶ್ಯ ಸೆರೆಯಾಗಿದೆ. ಕೊನೆಯಲ್ಲಿ ಮತ್ತೊಂದು ಹುಲಿಯೂ ಆಗಮಿಸುತ್ತಿರುವುದು ವಿಡಿಯೊದಲ್ಲಿದೆ.

ADVERTISEMENT

'ಹುಲಿ ಕ್ಸೈಲೋ ಕಾರನ್ನು ಕಚ್ಚುತ್ತಿರುವುದು ನನಗೇನು ವಿಶೇಷ ಎನಿಸುತ್ತಿಲ್ಲ. ಏಕೆಂದರೆ ಮಹೀಂದ್ರ ಕಾರುಗಳು ರುಚಿಕರ ಎಂಬ ನನ್ನ ಅನಿಸಿಕೆಯನ್ನೇ ಹುಲಿಯೂ ಹಂಚಿಕೊಂಡಿರಬೇಕು' ಎಂದು ಆನಂದ್‌ ಮಹೀಂದ್ರ ಟ್ವೀಟ್‌ನಲ್ಲಿ ತಮಾಷೆಯಾಗಿ ಬರೆದಿದ್ದಾರೆ.

ಮಹೀಂದ್ರ ಕ್ರೈಲೋ ಎಸ್‌ಯುವಿ ಗಾಡಿ ಸುಮಾರು 1.8 ಟನ್‌ ಭಾರವಿದೆ. ಪ್ರವಾಸಿಗರು ತುಂಬಿದ್ದ ಕಾರನ್ನು ಹೀಗೆ ಕಚ್ಚಿ ಎಳೆದಿದ್ದನ್ನು ನೋಡಿದ ಮಂದಿ ವಿಸ್ಮಿತರಾಗಿದ್ದಾರೆ.

'ಒಂದೆರಡು ವರ್ಷಗಳ ಹಿಂದೆ ಬನ್ನೇರುಘಟ್ಟ ಸಫಾರಿ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದೆ' ಎಂದು ವೈರಲ್‌ ಆಗಿರುವ ವಿಡಿಯೊ ಕುರಿತು ವನ್ಯಜೀವಿ ವಿಜ್ಞಾನಿಸಂಜಯ್‌ ಗುಬ್ಬಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.