ADVERTISEMENT

ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಗಳ ಎದುರೇ ನೀರು ಪಾಲಾದ ಅಮ್ಮ!

ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಹಿಳೆಯೊಬ್ಬರು ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಏಪ್ರಿಲ್ 2025, 10:37 IST
Last Updated 17 ಏಪ್ರಿಲ್ 2025, 10:37 IST
<div class="paragraphs"><p>ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಗಳ ಎದುರೇ ನೀರು ಪಾಲಾದ ಅಮ್ಮ!</p></div>

ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಗಳ ಎದುರೇ ನೀರು ಪಾಲಾದ ಅಮ್ಮ!

   

ಬೆಂಗಳೂರು: ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಹಿಳೆಯೊಬ್ಬರು ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಏಪ್ರಿಲ್ 16 ರಂದು ಉತ್ತರಾಖಂಡದ ಉತ್ತರಕಾಶಿ ಬಳಿಯ ಗಂಗಾನದಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಈ ದುರ್ಘಟನೆ ನಡೆದಿದೆ.

ADVERTISEMENT

ಅಂದು ಸುಮಾರು 25 ವರ್ಷದ ಮಹಿಳೆ ತನ್ನ ಮಗಳ ಕೈಗೆ ಮೊಬೈಲ್ ಕೊಟ್ಟು ನೀರಿಗೆ ಇಳಿದಿದ್ದರು. ಈ ವೇಳೆ ಆ ಮಹಿಳೆಯ ಮಗಳು ಎನ್ನಲಾದ ಬಾಲಕಿ ವಿಡಿಯೊ ಮಾಡುತ್ತಿದ್ದರು. ರೀಲ್ಸ್ ವಿಡಿಯೊಗಾಗಿ ನಟಿಸುವಂತೆ ಮಹಿಳೆ ವಿಡಿಯೊ ಕಡೆಗೆ ಮಗ್ನರಾಗಿದ್ದರು. ಈ ವೇಳೆ ಮಹಿಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.

ಮಹಿಳೆ ನೀರಿನ ಸೆಳೆತಕ್ಕೆ ಸಿಲುಕಿದಾಗ ವಿಡಿಯೊ ಮಾಡುತ್ತಿದ್ದ ಬಾಲಕಿ ‘ಮಮ್ಮಿ.. ಮಮ್ಮಿ..‘ ಎಂದು ಚೀರುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮಹಿಳೆಯ ಪತ್ತೆಗಾಗಿ ವಿಪತ್ತು ನಿರ್ವಹಣಾ ತಂಡದವರು ಹುಡುಕಾಟ ನಡೆಸಿದ್ದಾರೆ ಎಂದು ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ರೀಲ್ಸ್ ಹುಚ್ಚಿಗಾಗಿ, ಸಾಮಾಜಿಕ ಮಾಧ್ಯಮದಲ್ಲಿ ಮಿಂಚಬೇಕು ಎಂದು ಮೈಮರೆತರೆ ಇಂತಹ ಆಪತ್ತಿಗೆ ತುತ್ತಾಗಬೇಕಾಗುತ್ತದೆ ಎಂದು ಹಲವು ನೆಟ್ಟಿಗರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.