ADVERTISEMENT

ಗರ್ಲ್‌ಫ್ರೆಂಡ್‌ ಜೊತೆ ಶಾಪಿಂಗ್‌ ಮಾಡುತ್ತಿದ್ದವನಿಗೆ ಪತ್ನಿಯಿಂದ ಏಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2022, 10:59 IST
Last Updated 14 ಅಕ್ಟೋಬರ್ 2022, 10:59 IST
ಪತಿಗೆ ಥಳಿಸುತ್ತಿರುವ ಪತ್ನಿ
ಪತಿಗೆ ಥಳಿಸುತ್ತಿರುವ ಪತ್ನಿ   

ಘಾಜಿಯಾಬಾದ್‌: ಗರ್ಲ್‌ಫ್ರೆಂಡ್‌ ಜೊತೆ ಶಾಪಿಂಗ್‌ ವೇಳೆ ಸಿಕ್ಕಿಬಿದ್ದ ಪತಿಯನ್ನು, ಪತ್ನಿ ಹಿಗ್ಗಾಮುಗ್ಗ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ‌

ವಿವಾಹಿತ ಪುರುಷ, ಪತ್ನಿಗೆ ಗೊತ್ತಿಲ್ಲದಂತೆ ಗೆಳತಿಯೊಂದಿಗೆ ಕರ್ವಾ ಚೌತ್‌ ಅಂಗವಾಗಿ ಶಾಪಿಂಗ್‌ ನಡೆಸುತ್ತಿದ್ದ. ಮಾರುಕಟ್ಟೆಯಲ್ಲಿ ಆತನನ್ನು ಹಿಡಿದ ಪತ್ನಿ, ಸ್ಥಳದಲ್ಲಿಯೇ ಚೆನ್ನಾಗಿ ಥಳಿಸಿದ್ದಾಳೆ. ಮಹಿಳೆ ತನ್ನ ತಾಯಿಯೊಂದಿಗೆ ಶಾಪಿಂಗ್‌ ಬಂದ ವೇಳೆ ಆಕೆಗೆ ಪತಿರಾಯ ಇನ್ನೊಬ್ಬಳ ಜೊತೆ ಕಣ್ಣಿಗೆ ಬಿದ್ದಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾಳೆ.

ಪತಿಗೆ ಹೊಡೆಯಲು ಮುಂದಾದಾಗ ಆತನ ಗೆಳತಿ ರಕ್ಷಿಸಲು ಬಂದಿದ್ದಾಳೆ. ಆಕೆಗೂ ಕೂಡ ಚೆನ್ನಾಗಿ ಥಳಿಸಿದ್ದಾಳೆ. ಸದ್ಯ ವಿಡಿಯೊ ವೈರಲ್‌ ಆಗಿದ್ದು, ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.