ADVERTISEMENT

ಬೆಕ್ಕಿನ ಮರಿ ಎಂದು ಮನೆಗೆ ತೆಗೆದುಕೊಂಡು ಹೋದಾಗ ಗೊತ್ತಾಗಿದ್ದು ಕರಿಚಿರತೆ ಮರಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2023, 9:46 IST
Last Updated 26 ಸೆಪ್ಟೆಂಬರ್ 2023, 9:46 IST
   

ಮಾಸ್ಕೊ: ಸಾಮಾನ್ಯವಾಗಿ ರಸ್ತೆ ಬದಿಯಲ್ಲಿದ್ದ ಬೆಕ್ಕಿನ ಮರಿ ಅಥವಾ ನಾಯಿ ಮರಿಯನ್ನು ಪ್ರಾಣಿ ಪ್ರಿಯರು ಮನೆಗೆ ತಂದು ಸಾಕುತ್ತಾರೆ. ಆದರೆ, ಮನೆಗೆ ತಂದ ಮರಿ ಸಾಕು ಪ್ರಾಣಿಯಲ್ಲ, ಕಾಡು ಪ್ರಾಣಿ ಎಂದು ಗೊತ್ತಾದರೆ?.. ಅಂಥಹ ಒಂದು ಘಟನೆ ರಷ್ಯಾದಲ್ಲಿ ನಡೆದಿದೆ.

ರಷ್ಯಾ ಮೂಲದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿದ್ದ ಚಿರತೆ ಮರಿಯನ್ನು ಬೆಕ್ಕಿನ ಮರಿಯೆಂದು ತಿಳಿದು ಮನೆಗೆ ತಂದು ಸಾಕಿದ್ದಾರೆ. ಮರಿ ಬೆಳೆದು ದೊಡ್ಡದಾದಂತೆ ಅದು ಕಪ್ಪು ಚಿರತೆ ಎಂದು ಗೊತ್ತಾಗಿದೆ. 

ಮಹಿಳೆ ಚಿರತೆ ಮರಿಯನ್ನು ತರುವ ಮತ್ತು ಅದರ ಬೆಳವಣಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೊದಲ್ಲಿ ಮಹಿಳೆ ಮತ್ತು ಆಕೆ ಸಾಕಿದ ನಾಯಿ ಹಾಗೂ ಚಿರತೆಯ ನಡುವಿನ ಬಾಂಧವ್ಯದ ದೃಶ್ಯಗಳಿವೆ. 

ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ @factmayor ಎನ್ನುವ ಬಳಕೆದಾರರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ @luna_the_pantera ಎನ್ನುವ ಬಳಕೆದಾರರು ಸೆ.21ರಂದು ವಿಡಿಯೊವನ್ನು ಹಂಚಿಕೊಂಡಿದ್ದರು. 

ವಿಡಿಯೊ ಹಂಚಿಕೊಂಡಾಗಿನಿಂದ 9.1 ಮಿಲಿಯನ್‌ ವೀಕ್ಷಣೆ ಪಡೆದಿದ್ದು, 14 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಅಲ್ಲದೆ ಪ್ರಾಣಿಯನ್ನು ರಕ್ಷಿಸಿದ್ದಕ್ಕೆ ಹಲವರು ಅಭಿನಂದಿಸಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.