ADVERTISEMENT

ಸ್ಪಂದನ | ದಾಂಪತ್ಯ ಸುಖಮಯ ಆಗಲು...

ಡಾ.ವೀಣಾ ಎಸ್‌ ಭಟ್ಟ‌
Published 5 ಸೆಪ್ಟೆಂಬರ್ 2025, 23:53 IST
Last Updated 5 ಸೆಪ್ಟೆಂಬರ್ 2025, 23:53 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನನಗೆ 29 ವರ್ಷ, ನನ್ನ ಪತಿಗೆ 35 ವರ್ಷ. ಮದುವೆಯಾಗಿ ಎರಡು ವರ್ಷವಾಗಿದೆ. ನಮ್ಮ ನಡುವೆ ಒಂದು ಬಾರಿಯೂ ಸರಿಯಾಗಿ ಲೈಂಗಿಕ ಸಂಪರ್ಕ ಆಗಿಲ್ಲ. ನನ್ನ ಯೋನಿಯ ಬಾಯಿ ಚಿಕ್ಕದಿದೆ ಎಂದು ಅವರು ಹೇಳುತ್ತಾರೆ. ಲೈಂಗಿಕ ತಜ್ಞರನ್ನು ಭೇಟಿಯಾಗಿದ್ದೆವು. ‘ನೀವು ಲೈಂಗಿಕ ಸಂಪರ್ಕದಲ್ಲಿ ತೊಡಗಿದಾಗ ಮಾತ್ರ ಯೋನಿ ಮಾರ್ಗ ಅಗಲವಾಗುತ್ತದೆ’ ಎಂದು ತಿಳಿಸಿದ ಅವರು, ಒಂದು ಜೆಲ್ ಬಳಸಲು ಸೂಚಿಸಿದ್ದಾರೆ. ಆದರೆ ನಮ್ಮ ಮನೆಯವರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲ. ‘ನನಗೆ ಆಯಾಸ, ಸುಸ್ತು’ ಎಂದು ಹೇಳುತ್ತಾ ಮಲಗಿಬಿಡುತ್ತಾರೆ. ದಯವಿಟ್ಟು ಪರಿಹಾರ ತಿಳಿಸಿ. 

→ ನಂದನಾ, ಬೆಂಗಳೂರು

ADVERTISEMENT

ಲೈಂಗಿಕ ಕ್ರಿಯೆಯು ಸಂತಾನೋತ್ಪತ್ತಿಗಾಗಿ ಅಷ್ಟೇ ಅಲ್ಲ, ದೈಹಿಕ, ಮಾನಸಿಕ ಚೇತನವನ್ನು ಉಂಟು ಮಾಡಿ, ದಾಂಪತ್ಯ ಸಂಬಂಧಕ್ಕೆ ಹೊಸ ದಿಕ್ಕನ್ನು ನೀಡಲು ಅತಿ ಅವಶ್ಯ ಅಲ್ಲವೇ? ನಿಮ್ಮ ಪತಿಗೇನಾದರೂ ಶಿಶ್ನ ನಿಮಿರುವಿಕೆಯಲ್ಲಿ ತೊಂದರೆ ಇದ್ದು, ಆ ಬಗ್ಗೆ ಕೂಲಂಕಷವಾಗಿ ತಪಾಸಣೆ ನಡೆಸಲಾಗಿದೆಯೇ? ನಿಮಿರು ದೌರ್ಬಲ್ಯಕ್ಕೆ ಸಾಮಾನ್ಯ ಕಾರಣವಾದ ಮಧುಮೇಹ, ಏರು ರಕ್ತದೊತ್ತಡ, ಅತಿಯಾದ ಬೊಜ್ಜು, ಕೊಲೆಸ್ಟ್ರಾಲ್ ಹೆಚ್ಚುವಿಕೆ, ಅತಿ ಧೂಮಪಾನದಂತಹ ಕಾರಣಗಳಿವೆಯೇ ಎಂದು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ. ಅವರು ಯಾವುದಾದರೂ ಮಾನಸಿಕ ಸಮಸ್ಯೆ, ಮೂರ್ಛೆರೋಗದಂತಹ ಕಾಯಿಲೆಗಳಿಗೆ ಮಾತ್ರೆಗಳನ್ನು ಸೇವಿಸುತ್ತಿ
ದ್ದಾರೆಯೇ ವಿಚಾರಿಸಿ.

ಇಂದು ಭಾರತೀಯರಲ್ಲಿ ಶೇಕಡ 10ಕ್ಕೂ ಹೆಚ್ಚು ಪುರುಷರಲ್ಲಿ 30–40ರ ವಯಸ್ಸಿನಲ್ಲಿ ನಿಮಿರು ದೌರ್ಬಲ್ಯ ಇರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಮೊದಲು ನೀವಿಬ್ಬರೂ ಮುಜುಗರದ ಪರದೆ ಸರಿಸಿ, ಇರುವ ಸಮಸ್ಯೆಯ ಬಗ್ಗೆ ಮತ್ತೊಮ್ಮೆ ಮುಕ್ತವಾಗಿ ಚರ್ಚಿಸಿ. ಅವರಿಗಷ್ಟೇ ಅಲ್ಲ ನಿಮಗೂ ಏನಾದರೂ ಲೈಂಗಿಕ ಕ್ರಿಯೆಯ ಬಗ್ಗೆ ಆತಂಕ ಇದ್ದು, ಯೋನಿ ಸಂಕುಚನ ಅಥವಾ ವಾಜಿನಿಸ್ಮಸ್‌ನಂತಹ ಸಮಸ್ಯೆ ಇರಬಹುದು. ಅದರಿಂದಾಗಿ ಅವರಿಗೆ ನಿಮ್ಮ ಸಹಕಾರ ಸಿಗದೇ ಅವರು ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿಗೆ ಒಳಗಾಗಿದ್ದಾರೆಯೇ ಅಥವಾ ಅವರಲ್ಲೇ ಸಮಸ್ಯೆ ಇದೆಯೇ ಎಂದು ಮೂಲ ಕಾರಣವನ್ನು ಕಂಡುಹಿಡಿಯಬೇಕಾಗುತ್ತದೆ, ಇಬ್ಬರೂ ಆಪ್ತ ಸಮಾಲೋಚನೆಗೆ ಒಳಗಾಗಬೇಕಾಗುತ್ತದೆ. ಇಂದು ವೈದ್ಯಕೀಯ ವಿಜ್ಞಾನವು ಲೈಂಗಿಕ ವಿಜ್ಞಾನದ ಚಿಕಿತ್ಸೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ವಿವಿಧ ರೀತಿಯ ಮಾತ್ರೆಗಳು, ಇಂಜೆಕ್ಷನ್ ಹಾಗೂ ಶಾಕ್‌ವೇವ್‌ನಂತಹ ಚಿಕಿತ್ಸೆಗಳೆಲ್ಲ ಲಭ್ಯವಿವೆ. ನೀವು ತಪ್ಪದೇ ಇನ್ನೊಮ್ಮೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ, ನಿಮ್ಮ ಆತಂಕ, ಹಿಂಜರಿಕೆಯನ್ನೆಲ್ಲ ಬದಿಗಿಟ್ಟು ಮುಕ್ತವಾಗಿ ಚರ್ಚಿಸಿ. ಸೂಕ್ತ ಚಿಕಿತ್ಸೆ ಪಡೆದುಕೊಂಡು ತೃಪ್ತಿಕರ ಲೈಂಗಿಕ ಜೀವನ ನಡೆಸುವಂತಾದರೆ ಕೌಟುಂಬಿಕ ಸಾಮರಸ್ಯ, ಭವಿಷ್ಯದ ದಾಂಪತ್ಯ ಜೀವನ ಎಲ್ಲವೂ ಸುಖಮಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.