ಯಾರ ಮೆಚ್ಚುಗೆಯ ಹಂಗಿಲ್ಲದೇ, ಸಮಾಜದ ಸುಧಾರಣೆಗಾಗಿ ಒಳಿತಿಗಾಗಿ ಶ್ರಮಿಸುವ ಎಲೆಮರೆಕಾಯಿಯಂತೆ ದುಡಿಯುತ್ತಿರುವವರನ್ನು ಗುರುತಿಸಿ ‘ಪ್ರಜಾವಾಣಿ’ ಕೊಡುತ್ತಿರುವ ಪ್ರಶಸ್ತಿ ಈ ‘ಪ್ರಜಾವಾಣಿ ಸಾಧಕಿಯರು’. 2024ರಿಂದ ಪ್ರಾರಂಭವಾದ ಈ ಕಾರ್ಯ, 2025ಕ್ಕೂ ಮುಂದುವರಿದಿದೆ. ಈ ವರ್ಷ, ಶಿಕ್ಷಣತಜ್ಞೆ, ಹೋರಾಟಗಾರ್ತಿ, ಚಳವಳಿಕಾರ್ತಿ, ಕ್ರೀಡಾಪಟು ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅಸಾಮಾನ್ಯವಾದುದನ್ನು ಮಾಡುತ್ತಲೇ ಉಳಿದವರಿಗೆ ಮಾದರಿಯಾಗುತ್ತಿರುವ ಅಂಥ ಇನ್ನೊಂದು ತಂಡವನ್ನು ಗುರುತಿಸಲಾಗಿದೆ. ನಮ್ಮ ಬದುಕನ್ನು ಬೆಳಗಿದ ಈ ಸಾಧಕಿಯರ ಕುರಿತ ವಿಡಿಯೊ ಸರಣಿ ಮಾರ್ಚ್ 22ರಿಂದ ‘ಪ್ರಜಾವಾಣಿ’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.