
ಎಐ ಚಿತ್ರ
ಫೆಬ್ರುವರಿ 14 ವ್ಯಾಲೆಂಟೈನ್ಸ್ ಡೇ. ಪ್ರೇಮಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ತಮ್ಮ ಪ್ರಿಯತಮೆ/ಪ್ರಿಯಕರನಿಗೆ ಪ್ರೇಮ ನಿವೇದನೆ ಮಾಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಮತ್ತೊಂದು ಕಡೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವದಂಪತಿಗಳು ತಮ್ಮ ಮೊದಲ ವರ್ಷದ ವ್ಯಾಲೆಂಟೈನ್ಸ್ ಡೇ ಆಚರಣೆ ಹೇಗೆ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ.
ಹೀಗಾಗಿ ನವಜೋಡಿ ತಮ್ಮ ಮೊದಲ ವರ್ಷದ ವ್ಯಾಲೆಂಟೈನ್ಸ್ ಡೇಯನ್ನು ಜೊತೆಯಾಗಿ ಹಾಗೂ ವಿಶೇಷವಾಗಿ ಹೀಗೆ ಆಚರಣೆ ಮಾಡಬಹುದು. ಪ್ರೇಮಿಗಳ ದಿನಾಚರಣೆಗೆ ಇನ್ನು 15 ದಿನಗಳು ಬಾಕಿ ಉಳಿದಿವೆ. ಹೀಗಾಗಿ ನಿಮ್ಮ ಬಾಳ ಸಂಗಾತಿಯ ಜೊತೆಗೆ ನೀವು ಈ ವಿಶೇಷ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಆಚರಣೆ ಮಾಡಬಹುದು. ಕೆಲವೊಂದು ಸುಲಭ ಟಿಪ್ಸ್ ಈ ಕಳಗಿನಂತಿವೆ. ಅದಕ್ಕಿಂತ ಮುಂಚೆ ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದ ರೀಲ್ಸ್ ಸ್ಪರ್ಧೆ ಬಗ್ಗೆ ತಿಳಿಯಿರಿ.
ವ್ಯಾಲೆಂಟೈನ್ಸ್ ಡೇ ಅಂಗವಾಗಿ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಾರ್ಥ್ ಕ್ಯಾಂಪಸ್ ಸಹಯೋಗದೊಂದಿಗೆ ವಿಶೇಷ ರೀಲ್ಸ್ ಸ್ಪರ್ಧೆಯನ್ನು ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದೆ. ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧಗಳ ಮೌಲ್ಯ ಹಾಗೂ ಜೀವನದ ಸೌಂದರ್ಯವನ್ನು ಪ್ರತಿಬಿಂಬಿಸುವ ಸೃಜನಾತ್ಮಕ ರೀಲ್ಸ್‌ಗಳನ್ನು ಆಹ್ವಾನಿಸಲಾಗುತ್ತಿದೆ.
ಮೊದಲು ಪ್ರೇಮಿಗಳ ದಿನವನ್ನು ಆಚರಣೆ ಮಾಡುವಾಗ ನಿಮ್ಮ ಸಂಗಾತಿಯ ಆದ್ಯತೆಗಳು ಮತ್ತು ಭಾವನೆಗಳಿಗೆ ಪ್ರಾಮುಖ್ಯತೆ ನೀಡಬೇಕು. ನಿಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ಹೇಳಿಕೊಳ್ಳಲು ಒಂದು ಅದ್ಭುತ ಸಮಯವಾಗಿರುತ್ತದೆ. ಆ ದಿನ ನೀವು ಸಂಗಾತಿಗೆ ದುಬಾರಿ ಉಡುಗೊರೆ ಕೊಡುವ ಬದಲು ಪ್ರೀತಿಯನ್ನು ಹೇಳಿಕೊಳ್ಳಿ.
ಅರೆಂಜ್ ಮ್ಯಾರೇಜ್ ಆದವರು ಮುಕ್ತವಾಗಿ ಮಾತನಾಡಿ ಇಷ್ಟವನ್ನು ಹಂಚಿಕೊಳ್ಳಿ. ಜೀವನದ ಖುಷಿ, ನೋವಿನ ದಿನಗಳ ಬಗ್ಗೆ ಹೇಳಿಕೊಳ್ಳಿ. ಇದರಿಂದ ಸಂಗಾತಿಯನ್ನು ಇನ್ನಷ್ಟು ಅರಿತುಕೊಳ್ಳಬಹುದು.
ಪ್ರತಿಯೊಬ್ಬರ ಸಂಗಾತಿಯ ಆಲೋಚನೆ ಬೇರೆಯೇ ಆಗಿರುತ್ತದೆ. ಮೊದಲು ನಿಮ್ಮ ಸಂಗಾತಿ ಇಷ್ಟವನ್ನು ಅರಿಯಿರಿ. ನಂತರ ಅವರು ಮೆಚ್ಚುವಂತೆ ಉಡುಗೆಯನ್ನು ತೊಟ್ಟು ಅವರ ಮುಂದೆ ಪ್ರೇಮ ನಿವೇದನೆ ಮಾಡಿ. ಇದು ಅವಳಿಗೆ/ಅವನಿಗೆ ತುಂಬಾ ವಿಶೇಷ ಎನಿಸುತ್ತದೆ.
ದಂಪತಿಗಳು ಪರಸ್ಪರ ಚರ್ಚಿಸಿ ನೆಚ್ಚಿನ ಸ್ಥಳಕ್ಕೆ ಹೋಗಿ ಮೇಣದ ಬತ್ತಿಯ ಬೆಳಕಿನಲ್ಲಿ ಇಷ್ಟವಾದ ಊಟ ಸವಿಯಿರಿ. ಆಕೆಯ/ಆತನ ಜೊತೆಗೆ ನೃತ್ಯ ಮಾಡಿ. ಅದೇ ವೇಳೆ ಉಡುಗೊರೆ ರೂಪದಲ್ಲಿ ಏನಾದರೂ ನೀಡಿ, ಪ್ರೇಮ ನಿವೇದನೆ ಮಾಡಿ.
ಆ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ನೀವೇ ಖುದ್ದು ಮನೆಯಲ್ಲಿ ಅಡುಗೆ ಮಾಡಿ ಆಕೆಗೆ ಕೈತುತ್ತು ನೀಡಿ. ಇದಲ್ಲದೇ ನೀವಿಬ್ಬರೂ ಒಟ್ಟಿಗೆ ಸೇರಿಕೊಂಡು ಅಡುಗೆ ಮಾಡಬಹುದು. ಜೊತೆಗೆ ಒಟ್ಟಿಗೆ ಸಮಯ ಕಳೆಯಬಹುದು.
ಮದುವೆಯ ನಂತರ ಮೊದಲ ವ್ಯಾಲೆಂಟೈನ್ಸ್ ಡೇ ಆಚರಿಸುವ ನವಜೋಡಿ ವಿಶೇಷವಾದ ಫೋಟೊಶೂಟ್ ಮಾಡಿಸಿ. ಫೋಟೊ ಫ್ರೇಮ್ ಯಾವಾಗಲೂ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆ ದಿನ ವಿಶೇಷವಾಗಿ ನಿಮ್ಮ ಮದುವೆಯ ಉಡುಪನ್ನು ಅಥವಾ ಯಾವುದಾದರು ಒಪ್ಪುವ ಬಟ್ಟೆ ಧರಿಸಿ ಫೋಟೊಗೆ ಪೋಸ್ ಕೊಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.