ADVERTISEMENT

Valentine's Day : ಯಾವ ಬಣ್ಣದ ಗುಲಾಬಿ ಏನನ್ನು ಸಂಕೇತಿಸುತ್ತದೆ?ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 11:41 IST
Last Updated 7 ಫೆಬ್ರುವರಿ 2026, 11:41 IST
   

ಫೆಬ್ರುವರಿ ಎಂದರೆ ಪ್ರೇಮಿಗಳಿಗೆ ಸಂಭ್ರಮದ ಕ್ಷಣ. ಫೆ.14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತದೆ. ಫೆ.7ರಿಂದ 7 ದಿನಗಳ ಕಾಲ ಒಂದೊಂದು ದಿನ ಆಚರಿಸಿ ಕೊನೆಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ದಿನಕ್ಕೆ ಕೆಂಪು ಗುಲಾಬಿ ಹೂವುಗಳಿಗೇ ಬೇಡಿಕೆ ಹಚ್ಚು. ಗುಲಾಬಿಯಲ್ಲಿ ಹಲವು ಬಣ್ಣಗಳಿವೆ. ಅವುಗಳು ಸಂಕೇತವೇ ಬೇರೆ ಎನ್ನುತ್ತದೆ ಯುವಲೋಕ. ಹಾಗಾದರೆ ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಕೆಂಪು ಗುಲಾಬಿ

ಕೆಂಪು ಗುಲಾಬಿ

ಕೆಂಪು ಗುಲಾಬಿ ಕೇವಲ ಹೂವಲ್ಲ, ಅದು ಪ್ರೀತಿ ಮತ್ತು ಭಾವನಾತ್ಮಕ ಸಂಬಂಧಗಳ ಸಂಕೇತವಾಗಿದೆ. ಕೆಂಪು ಗುಲಾಬಿ ನೀಡುವ ಮೂಲಕ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುತ್ತಾರೆ. ಕೆಂಪು ಗುಲಾಬಿಯನ್ನು ಪ್ರೀತಿಯ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ADVERTISEMENT

ತಿಳಿ ನೇರಳೆ ಬಣ್ಣದ ಗುಲಾಬಿ

ತಿಳಿ ನೇರಳೆ ಬಣ್ಣ

ತನ್ನ ಬಣ್ಣದಿಂದಲೇ ಸೆಳೆಯುವ ತಿಳಿ ನೇರಳೆ ಬಣ್ಣದ (ಲ್ಯಾವೆಂಡರ್) ಗುಲಾಬಿಯು ಪ್ರೀತಿ, ಮೋಹಕತೆಯ ಸಂಕೇತವಾಗಿದೆ. ಮೊದಲ ನೋಟದಲ್ಲೇ ಮನಸ್ಸು ಕದ್ದ ಪ್ರೀತಿ ಪಾತ್ರರಿಗೆ ಲ್ಯಾವೆಂಡರ್ ನೀಡಿ ತಮ್ಮ ಭಾವನೆ ವ್ಯಕ್ತಪಡಿಸಬಹುದು.

ಗುಲಾಬಿ (ಪಿಂಕ್) ಬಣ್ಣದ ಹೂವು

ಗುಲಾಬಿ ಬಣ್ಣದ ಗುಲಾಬಿ

ಪ್ರೇಮಿಗಳ ದಿನದಂದು ಗುಲಾಬಿ ಬಣ್ಣದ ಹೂ ತನ್ನದೇ ಪ್ರಾಮುಖ್ಯತೆಯನ್ನು ಹೊಂದಿದೆ. ಗುಲಾಬಿ ಬಣ್ಣದ ಗುಲಾಬಿ ಹೂ ಪ್ರೀತಿಯ, ಸ್ನೇಹದ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ನಮ್ಮ ಜೀವನದ ಕಷ್ಟದ ದಿನಗಳಲ್ಲಿ ಜೊತೆ ನಿಂತ ವ್ಯಕ್ತಿಗಳಿಗೆ ಗುಲಾಬಿ ಬಣ್ಣದ ಹೂವು ನೀಡುವ ಮೂಲಕ ಕೃತಜ್ಞತೆ ಸಲ್ಲಿಸಬಹುದು.

ಬಿಳಿ ಬಣ್ಣದ ಗುಲಾಬಿ

ಬಿಳಿ ಬಣ್ಣದ ಗುಲಾಬಿ

ಬಿಳಿ ಗುಲಾಬಿಯು ಶುದ್ಧತೆ, ನಿಷ್ಠೆಯ ಸಂಕೇತವಾಗಿದೆ. ಹೊಸ ಸಂಬಂಧ, ಹೊಸ ಸ್ನೇಹ, ಅಥವಾ ಹೊಸ ಜೀವನದ ಅಧ್ಯಾಯವನ್ನು ಆರಂಭಿಸುವ ಸಂದರ್ಭದಲ್ಲಿ ಬಿಳಿ ಗುಲಾಬಿಯನ್ನು ನೀಡಬಹುದು. ಪ್ರೇಮಿಗಳಿಗಷ್ಟೇ ಅಲ್ಲದೆ ನೆಚ್ಚಿನ ಪ್ರೀತಿಪಾತ್ರರಿಗೂ ನೀಡಬಹುದು.

ಹಳದಿ ಗುಲಾಬಿ

ಹಳದಿ ಗುಲಾಬಿ ಸ್ನೇಹದ ಸಂಕೇತವಾಗಿದೆ. ಹೊಸ ಸ್ನೇಹಿತರಿಗೆ ಹಳದಿ ಗುಲಾಬಿ ನೀಡುವ ಮೂಲಕ ನಿಮ್ಮ ಗೆಳೆತನಕ್ಕೆ ಬರಮಾಡಿಕೊಳ್ಳಬಹುದು.

ಕಿತ್ತಳೆ ಬಣ್ಣದ ಗುಲಾಬಿ

ಕಿತ್ತಳೆ ಬಣ್ಣ‌ವು ಆಕರ್ಷಣೆಯ ಸಂಕೇತವಾಗಿದೆ. ವ್ಯಕ್ತಿಯೊಬ್ಬರ ಮೇಲೆ ಮನಸ್ಸಾಗಿದ್ದರೆ ಅಂತಹವರಿಗೆ ಕಿತ್ತಳೆ ಬಣ್ಣದ ಗುಲಾಬಿಯನ್ನು ನೀಡಿ ಭಾವನೆಯನ್ನು ವ್ಯಕ್ತಪಡಿಸಬಹುದು.

ಪೀಚ್ ಬಣ್ಣದ ಗುಲಾಬಿ

ಪೀಚ್ ಬಣ್ಣವು ಶುದ್ಧತೆ ಹಾಗೂ ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ಪ್ರೀತಿಯಲ್ಲಾಗಲೀ, ಸ್ನೇಹದಲ್ಲಾಗಲೀ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸಲು ಈ ಪೀಚ್ ಬಣ್ಣದ ಗುಲಾಬಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.