ADVERTISEMENT

ಮಧ್ಯಮ ಬೆಲೆಗೆ ಉತ್ತಮ 5ಜಿ ಫೋನ್ ‘ವಿವೊ ಐಕ್ಯುಒಒ ಜೆಡ್‌3’

ವಿಶ್ವನಾಥ ಎಸ್.
Published 21 ಜುಲೈ 2021, 11:53 IST
Last Updated 21 ಜುಲೈ 2021, 11:53 IST
ಐಕ್ಯುಒಒ ಜೆಡ್‌3
ಐಕ್ಯುಒಒ ಜೆಡ್‌3   

ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವೊ ಕಂಪನಿ ಉತ್ತಮ ಹಿಡಿತ ಹೊಂದಿದೆ. ತನ್ನ ಐಕ್ಯುಒಒ ಸಬ್‌ ಬ್ರ್ಯಾಂಡ್‌ನಲ್ಲಿ ‘ಐಕ್ಯುಒಒ ಜೆಡ್‌3’ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ಗಮನ ಹರಿಸಿದೆ. ಸದ್ಯ ಭಾರತದಲ್ಲಿ 5ಜಿ ನೆಟ್‌ವರ್ಕ್‌ ಲಭ್ಯವಿಲ್ಲದೇ ಇದ್ದರೂ ಬೆಲೆಯ ದೃಷ್ಟಿಯಿಂದ ಇದು ಗ್ರಾಹಕರನ್ನು ಆಕರ್ಷಿಸಲಿದೆ.

ವಿವೊ ಐಕ್ಯುಒಒ ಜೆಡ್‌3 ಸ್ಮಾರ್ಟ್‌ಫೋನ್‌ ಸಂಪೂರ್ಣವಾಗಿ ಅಂಚುರಹಿತ ಮತ್ತು ಸ್ಪೋರ್ಟ್ಸ್‌ ಪಂಚ್‌ ಹೋಲ್‌ ಕಟ್ ಪರದೆ ಹೊಂದಿದೆ. 6.67 ಇಂಚು ಐಪಿಎಸ್‌ ಎಲ್‌ಸಿಡಿ ಫುಲ್‌ ಎಚ್‌ಡಿ ಪ್ಲಸ್‌ ಪರದೆ, 1080X2400 ಪಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ.
64 ಎಂಪಿ ಪ್ರೈಮರಿ ಕ್ಯಾಮೆರಾ, 8 ಎಂಪಿ ಅಲ್ಟ್ರಾವೈಡ್‌ ಆ್ಯಂಗಲ್ ಮತ್ತು 2 ಎಂಪಿ ಮ್ಯಾಕ್ರೊ ಕ್ಯಾಮೆರಾ ಹೊಂದಿದೆ.

ಸಂಗ್ರಹಣಾ ಸಾಮರ್ಥ್ಯದ ಅಗತ್ಯವನ್ನು ಹೆಚ್ಚಿಸಲು 128 ಜಿಬಿ ಇನ್‌ಬಿಲ್ಟ್‌ ಮೆಮೊರಿ ನೀಡಲಾಗಿದೆ. ಇದರ ಹೊರತಾಗಿ ಹೆಚ್ಚುವರಿಯಾಗಿ ಮೆಮೊರಿ ವಿಸ್ತರಿಸಲು ಅವಕಾಶ ಇಲ್ಲ. ಮೀಡಿಯಾಟೆಕ್‌ ಡೈಮೆನ್ಸಿಟಿ 1100 ಎಂಟಿ 6891ಜೆಡ್‌ ಆಕ್ಟಾ ಕೋರ್‌ ಚಿಪ್‌ಸೆಟ್‌ ಹೊಂದಿದೆ. ಮಲ್ಟಿಟಾಸ್ಕ್‌ ನಿರ್ವಹಣೆಯನ್ನು ಸುಲಭಗೊಳಿಸಲು 6ಜಿಬಿ ರ್‍ಯಾಮ್‌ ಇದೆ.

ADVERTISEMENT

64 ಎಂಪಿ ಪ್ರೈಮರಿ ಕ್ಯಾಮೆರಾ ಇದ್ದು, ಹಗಲು ಬೆಳಕಿನಲ್ಲಿ ತೆಗೆದ ಚಿತ್ರದ ಕ್ಲಾರಿಟಿ ಉತ್ತಮವಾಗಿದೆ. ಅಲ್ಟ್ರಾವೈಡ್‌ ಮೋಡ್‌ನಲ್ಲಿ ಚಿತ್ರದ ಗುಣಮಟ್ಟ ತುಸು ಕಡಿಮೆ ಆಗುತ್ತದೆ. ನೈಟ್‌ ಮೋಡ್‌ನಲ್ಲಿ ಚಿತ್ರವು ಚೆನ್ನಾಗಿ ಸೆರೆಯಾಗುತ್ತದೆ. ಸೆಲ್ಫಿ ಆಯ್ಕೆಯಲ್ಲಿ ಸಹಜ ಮೈಬಣ್ಣದ ಚಿತ್ರ ಮೂಡಿಬರುತ್ತದೆ. ಸೆಲ್ಫಿ ಆಯ್ಕೆಯಲ್ಲಿ ಇರುವ ಫಿಲ್ಟರ್‌ನಲ್ಲಿ ಬ್ಲಾಕ್‌ ಅ್ಯಂಡ್‌ ವೈಟ್‌ ಚಿತ್ರ ಸೆರೆಯಾಗುವ ಸೈಲೆಂಟ್‌ ಆಯ್ಕೆ ಹೆಚ್ಚು ಹಿಡಿಸಿತು.

4ಕೆ ವಿಡಿಯೊ ನೋಡುವಾಗ, ಆಸ್ಪಾಟ್‌ 9 ಲೆಜೆಂಡ್‌ನಂತಹ ಗೇಮ್‌ ಆಡುವಾಗ ಇದರ ಕಾರ್ಯಾಚರಣಾ ವೇಗದ ನಿಜವಾದ ಅನುಭವ ಗಮನಕ್ಕೆ ಬರುತ್ತದೆ. 4,500 ಎಂಎಎಚ್‌ ಬ್ಯಾಟರಿ ಇದ್ದು, 55ಡಬ್ಲ್ಯು ಫ್ಲ್ಯಾಷ್‌ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ. 30 ನಿಮಿಷದಲ್ಲಿ ಶೇ 67ರಷ್ಟು ಚರ್ಜ್‌ ಆಗುತ್ತದೆ. ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 70 ನಿಮಿಷ ತೆಗೆದುಕೊಂಡಿದೆ. 19 ನಿಮಿಷದಲ್ಲಿ ಶೇ 50ರಷ್ಟು ಬ್ಯಾಟರಿ ಚಾರ್ಜ್‌ ಅಗಲಿದೆ. ಕರೆ ಮಾಡಲು ಮತ್ತು ವಾಟ್ಸ್‌ಆ್ಯಪ್‌ಗೆ ಮಾತ್ರ ಫೋನ್ ಬಳಸಿದರೆ ಒಂದೂವರೆ ದಿನದವರೆಗೂ ಬ್ಯಾಟರಿ ಬಾಳಿಕೆ ಬರುತ್ತದೆ. ವಿಡಿಯೊ ನೋಡಿದರೆ, ಗೇಮ್‌ ಆಡಿದರೆ ಒಂದು ದಿನಕ್ಕಂತೂ ಯಾವುದೇ ಸಮಸ್ಯೆ ಆಗುವುದಿಲ್ಲ.

ಪವರ್‌ ಬಟನ್‌ ಇರುವ ಜಾಗದಲ್ಲಿಯೇ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಅಳವಡಿಸಲಾಗಿದೆ. ಇದು ಸ್ವಲ್ಪ ಮಟ್ಟಿಗೆ ಕಿರಿಕಿರಿ ಉಂಟುಮಾಡುತ್ತದೆ. ಒಟ್ಟಾರೆಯಾಗಿ, ಕಾರ್ಯಾಚರಣೆ ವೇಗ, ಕ್ಯಾಮೆರಾ ಕ್ಲಾರಿಟಿ ಮತ್ತು ಬ್ಯಾಟರಿ ಬಾಳಿಕೆಯ ದೃಷ್ಟಿಯಿಂದ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಪರಿಗಣಿಸಬಹುದಾಗಿದೆ.

ವೈಶಿಷ್ಟ್ಯ

ಪರದೆ; 6.58 ಇಂಚು. ಎಫ್‌ಎಚ್‌ಡಿ ಪ್ಲಸ್

ಒಎಸ್‌; ಆಂಡ್ರಾಯ್ಡ್‌ 11 ಅಧಾರಿತ ಆಕ್ಸಿಜನ್‌ ಒಎಸ್‌ 11.1

ಪ್ರೊಸೆಸರ್; ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 768ಜಿ 5ಜಿ

ರ್‍ಯಾಮ್‌;6ಜಿಬಿ/8ಜಿಬಿ

ರೋಮ್;128ಜಿಬಿ/256ಜಿಬಿ

ಕ್ಯಾಮೆರಾ;64+8+2 ಎಂಪಿ

ಸೆಲ್ಫಿ ಕ್ಯಾಮೆರಾ; 16 ಎಂಪಿ

ಬ್ಯಾಟರಿ;4,400 ಎಂಎಎಚ್

ಬೆಲೆ;
6+128ಜಿಬಿ–₹ 19,990
8+128ಜಿಬಿ=₹20,990
8+256 ಜಿಬಿ–₹22,990

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.