ADVERTISEMENT

ಇಸ್ರೊ | ಸಣ್ಣ ಉಪಗ್ರಹ ಉಡಾವಣೆ: ಕೊನೆ ಹಂತದಲ್ಲಿ ದತ್ತಾಂಶ ನಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2022, 11:23 IST
Last Updated 7 ಆಗಸ್ಟ್ 2022, 11:23 IST
ರಾಕೆಟ್‌ ಉಡಾವಣೆ ಚಿತ್ರ
ರಾಕೆಟ್‌ ಉಡಾವಣೆ ಚಿತ್ರ   

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಚೊಚ್ಚಲ ಸಣ್ಣಉಡಾವಣೆ ನೌಕೆ (ರಾಕೆಟ್‌)ಎಸ್‌ಎಸ್‌ಎಲ್‌ವಿ–ಡಿ1ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಆದರೆ ಅಂತಿಮ ಘಟ್ಟದಲ್ಲಿ ತಾಂತ್ರಿಕ ಕಾರಣಗಳಿಂದ ದತ್ತಾಂಶ ನಷ್ಟವಾಗಿದೆ ಎಂದು ಇಸ್ರೊ ಹೇಳಿದೆ.

ಭೂ ವೀಕ್ಷಣೆ ಉಪಗ್ರಹ ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ ಆಜಾದಿ ಉಪಗ್ರಹ (AzaadiSAT)ಗಳನ್ನುಹೊತ್ತು ಸಾಗಿದೆ ಎಂದು ಇಸ್ರೊ ಹೇಳಿದೆ.

ಇಸ್ರೊ ಪೂರ್ವ ನಿಗದಿ ಮಾಡಿದಂತೆ ಇಂದು ಬೆಳಗ್ಗೆ 9 ಗಂಟೆ 18 ನಿಮಿಷಕ್ಕೆ ಸರಿಯಾಗಿ ರಾಕೆಟ್ ಉಡಾವಣೆಯಾಯಿತು. ಉಡಾವಣೆಯ ವೇಳೆ ಇಸ್ರೊ ಮಾಜಿ ಅಧ್ಯಕ್ಷ ಕೆ.ಶಿವನ್ ಸೇರಿದಂತೆ ವಿಜ್ಞಾನಿಗಳು, ತಂತ್ರಜ್ಞರು ಉಪಸ್ಥಿತರಿದ್ದರು.

ADVERTISEMENT

ಎಸ್‌ಎಸ್‌ಎಲ್‌ವಿ-ಡಿ1 ಎಲ್ಲಾ ಹಂತಗಳಲ್ಲಿ ನಿರೀಕ್ಷೆಯಂತೆ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಆದರೆ, ಗುರಿ ತಲುಪುವ ಹಂತದಲ್ಲಿ ದತ್ತಾಂಶ ನಷ್ಟವಾಗಿದೆ. ಉಪಗ್ರಹ ಸ್ಥಿರವಾದ ಕಕ್ಷೆ ಸೇರಿದ ಬಗ್ಗೆ ಅಂತಿಮ ಫಲಿತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಎಸ್‌ಎಸ್‌ಎಲ್‌ವಿ ಯೋಜನೆಯು ಮೂರು ಹಂತದ ಉಡಾವಣೆ ಯೋಜನೆಯಾಗಿದೆ. ಇಂದುಎಸ್‌ಎಸ್‌ಎಲ್‌ವಿ–ಡಿ1 ಉಡಾವಣೆ ಮಾಡಲಾಗಿದೆ. ಇನ್ನು 2 ಉಪಗ್ರಹಗಳ ಉಡಾವಣೆಯು ಬಾಕಿ ಇದೆ.ಈ ಯೋಜನೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ₹ 169 ಕೋಟಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.