ADVERTISEMENT

ವಿಡಿಯೊ ವೈರಲ್ | ಸೀರೆ ಅಂಗಡಿಯಲ್ಲಿ ಸ್ಯಾನಿಟೈಸರ್ ನೀಡುವ ಮನುಷ್ಯಾಕೃತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 10:56 IST
Last Updated 26 ಜುಲೈ 2020, 10:56 IST
ಸೀರೆ ಗೊಂಬೆ
ಸೀರೆ ಗೊಂಬೆ   

ತಮಿಳುನಾಡಿನಲ್ಲಿನ ಸೀರೆ ಅಂಗಡಿಯೊಂದರಲ್ಲಿ ಸೀರೆ ಉಟ್ಟಿರುವ ಮನುಷ್ಯಾಕೃತಿಯೊಂದು ಅತ್ತಿಂದಿತ್ತ ಓಡಾಡಿ ಗ್ರಾಹಕರಿಗೆ ಸ್ಯಾನಿಟೈಸರ್ ನೀಡುವ ವಿಡಿಯೊವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೊವನ್ನು ಅನೇಕ ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕು ಹರಡಲು ಆರಂಭವಾದ ದಿನಗಳಿಂದ ಪ್ರಪಂಚದೆಲ್ಲೆಡೆ ಜನರ ಜೀವನಶೈಲಿಯೇ ಬದಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್‌ ಹಾಗೂ ಸ್ಯಾನಿಟೈಸರ್ ನಮ್ಮ ದಿನಬಳಕೆಯ ಸ್ನೇಹಿತನಂತಾಗಿದೆ. ಯಾವುದೇ ಅಂಗಡಿ, ದೇವಸ್ಥಾನ, ಕಚೇರಿಗಳಿಗೆ ಹೋದರು ಅಲ್ಲಿ ಸ್ಯಾನಿಟೈಸರ್ ಬಳಸಿಯೇ ಒಳಗೆ ಹೋಗಬೇಕು. ಪ್ರತಿ ಅಂಗಡಿ, ಕಚೇರಿಗಳ ಮುಂದು ಸ್ಯಾನಿಟೈಸರ್ ಮಷಿನ್ ಇಟ್ಟಿರುವುದು ಸಾಮಾನ್ಯ.

ಈ ಪ್ರಸ್ತುತ ಪರಿಸ್ಥಿತಿಗೆ ತಮಿಳುನಾಡಿನ ಸೀರೆ ಅಂಗಡಿಯೊಂದು ಹೊಸ ಕ್ರಿಯಾತ್ಮಕ ಯೋಚನೆಯೊಂದನ್ನು ಜಾರಿಗೊಳಿಸಿದೆ. ಅದೇನಪ್ಪಾ ಅಂದ್ರೆ ಸೀರೆ ಉಟ್ಟಿರುವ ಮನುಷ್ಯಾಕೃತಿ ನಿಮ್ಮನ್ನು ವೆಲ್‌ಕಮ್‌ ಮಾಡುವ ಜೊತೆಗೆ ಸ್ಯಾನಿಟೈಸರ್ ಕೂಡ ನೀಡುತ್ತದೆ. ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಸೀರೆರಾಣಿ ಗೊಂಬೆ ಸ್ಯಾನಿಸೈಟರ್ ನೀಡುವ ವಿಡಿಯೊ ಈಗ ಸಕ್ಕತ್ ವೈರಲ್ ಆಗಿದೆ. ಅಲ್ಲದೇ ಅನೇಕರು ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಹೊಸ ಐಡಿಯಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಮನುಷ್ಯಾಕೃತಿಯ ಗೊಂಬೆ ಸಂಪೂರ್ಣ ಸ್ವಯಂಚಾಲಿತವಾಗಿದೆ. ಅಲ್ಲದೇ ಇದು ಹೆಚ್ಚು ಗಮನ ಸೆಳೆಯವುದು ತನ್ನ ವಿಭಿನ್ನ ನೋಟದಿಂದ. ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚುವ ಈ ಗೊಂಬೆ ಗ್ರಾಹಕರು ಇರುವ ಕಡೆ ತಾನೇ ಹೋಗಿ ಸ್ಯಾನಿಟೈಸರ್ ನೀಡುತ್ತದೆ.

ಅರಣ್ಯ ಇಲಾಖೆಯ ಅಧಿಕಾರಿ ಸುಧಾ ರಮೆನ್ ಎನ್ನುವವರು ತಮಿಳುನಾಡಿನ ಈ ವಿಡಿಯೊವನ್ನು ಹಂಚಿಕೊಂಡಿದ್ದು ‘ತಮಿಳುನಾಡಿನ ಬಟ್ಟೆ ಮಳಿಗೆಯಲ್ಲಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಒಂದು ಸ್ವಂಚಾಲಿತ ಮಾನವಾಕೃತಿಯ ಗೊಂಬೆ ಗ್ರಾಹಕರು ಇರುವವಲ್ಲಿಗೆ ಹೋಗಿ ಸ್ಯಾನಿಟೈಸರ್ ನೀಡುತ್ತಿದೆ. ಕೊರೊನಾ ನಂತರ ಇಂತಹ ತಾಂತ್ರಿಕ ವಿಕಾಸಗಳನ್ನು ನೋಡುವುದು ಖಚಿತವಾಗಿದೆ’ ಎಂದು ಬರೆದುಕೊಂಡಿದ್ದಾರೆ. ‌

ಈ ವಿಡಿಯೊವನ್ನು 32 ಸಾವಿರ ಮಂದಿ ವೀಕ್ಷಿಸಿದ್ದು ಅನೇಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.