ADVERTISEMENT

ಕಾನ್ ಚಿತ್ರೋತ್ಸವ:ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಜಾನಪದ ಕಲಾವಿದ ಮಾಮೆ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2022, 5:06 IST
Last Updated 18 ಮೇ 2022, 5:06 IST
ಮಾಮೆ ಖಾನ್
ಮಾಮೆ ಖಾನ್   

ಪ್ಯಾರಿಸ್: ರಾಜಸ್ಥಾನ ಮೂಲದ ಜಾನಪದ ಕಲಾವಿದ, ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಮಾಮೆ ಖಾನ್ ಅವರು ಕಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತ ಮೂಲದ ಜಾನಪದ ಕಲಾವಿದರೊಬ್ಬರು ಕಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು ಇದೇ ಮೊದಲು.

ಚಲನಚಿತ್ರೋತ್ಸವದಲ್ಲಿ ಭಾರತಕ್ಕೆ ರೆಡ್ ಕಾರ್ಪೆಟ್ ತೆರೆದ ಮೊದಲ ಜಾನಪದ ಕಲಾವಿದ ಎಂಬ ಹೆಗ್ಗಳಿಕೆಗೆ ಮಾಮೆ ಖಾನ್ ಪಾತ್ರರಾಗಿದ್ದಾರೆ.

ADVERTISEMENT

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ನೇತೃತ್ವದಲ್ಲಿ ಕಾನ್ ಚಿತ್ರೋತ್ಸವಕ್ಕೆ ತೆರಳಿರುವ ಭಾರತೀಯ ನಿಯೋಗದಲ್ಲಿ ಮಾಮ್ ಖಾನ್ ಕೂಡ ಭಾಗವಾಗಿದ್ದಾರೆ.

ಕಸೂತಿ ಕೋಟ್‌ ಹಾಗೂ ಗುಲಾಬಿ ಕುರ್ತಾವನ್ನು ಒಳಗೊಂಡಿರುವ ರಾಜಸ್ಥಾನಿ ಸಾಂಪ್ರದಾಯಿಕ ಉಡುಪಿನಲ್ಲಿ ಖಾನ್ ಕಾಣಿಸಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳನ್ನು ಒಳಗೊಂಡ ತಂಡವು ಭಾರತೀಯ ಸಿನಿಮಾದ ವೈವಿಧ್ಯತೆ ಮತ್ತು ಅನನ್ಯತೆಯನ್ನು ಪ್ರದರ್ಶಿಸಿದೆ.

ಮಾಮೆ ಖಾನ್, ಶೇಖರ್ ಕಪೂರ್, ಪೂಜಾ ಹೆಗ್ಡೆ, ನವಾಜುದ್ದೀನ್ ಸಿದ್ಧಿಕಿ, ತಮನ್ನಾ ಭಾಟಿಯಾ, ಆರ್. ಮಾಧವನ್, ಎ.ಆರ್. ರೆಹಮಾನ್, ಪ್ರಸೂನ್ ಜೋಶಿ, ವಾಣಿ ತ್ರಿಪಾಠಿ, ರಿಕಿ ಕೇಜ್ ಸೇರಿದಂತೆ ಅನೇಕರು ಭಾರತೀಯ ನಿಯೋಗದ ಭಾಗವಾಗಿದ್ದಾರೆ.

ಮೇ 17ರಿಂದ 28ರವರೆಗೆ 75ನೇ ಕಾನ್ ಚಲನಚಿತ್ರೋತ್ಸವ ನಡೆಯಲಿದೆ ಎಂದು ಟ್ವಿಟರ್ ಮೂಲಕ ಪ್ರಕಟಿಸಲಾಗಿದ್ದು, ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರು ಮುಖ್ಯ ತೀರ್ಪುಗಾರರಾಗಿರುತ್ತಾರೆ.

21 ಸಿನಿಮಾಗಳು ಪ್ರಶಸ್ತಿ ಸುತ್ತಿನಲ್ಲಿದ್ದು, ಬಾಲಿವುಡ್ ನಟಿ ದೀ‍ಪಿಕಾ ಪಡುಕೋಣೆ ಅವರು ಎಂಟು ಮಂದಿ ತೀರ್ಪುಗಾರರ ತಂಡದಲ್ಲಿದ್ದಾರೆ. ಮೇ 28ರಂದು ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಘೋಷಣೆ ಕಾರ್ಯಕ್ರಮ ನಡೆಯಲಿದೆ.

'ಲಕ್ ಬೈ ಚಾನ್ಸ್', 'ನೋ ಒನ್ ಕಿಲ್ಡ್ ಜೆಸ್ಸಿಕಾ', ಮತ್ತು ‘ಸೋಂಚಿರಿಯಾ’ ಮುಂತಾದ ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿರುವ ಮೊಮೆ ಖಾನ್ ಮತ್ತು ಅಮಿತ್ ತ್ರಿವೇದಿ ಅವರೊಂದಿಗೆ ಕೋಕ್ ಸ್ಟುಡಿಯೋದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.