ADVERTISEMENT

ದ್ವಿತೀಯ ಪಿಯು ಕಲಾ ವಿಭಾಗ: ಮೂವರು ಟಾಪರ್‌ಗಳಲ್ಲಿ ಕೊಟ್ಟೂರಿನ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 7:03 IST
Last Updated 10 ಏಪ್ರಿಲ್ 2024, 7:03 IST
<div class="paragraphs"><p>ಕವಿತಾ ಬಿ.ವಿ.</p></div>

ಕವಿತಾ ಬಿ.ವಿ.

   

ಹೊಸಪೇಟೆ (ವಿಜಯನಗರ): ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಮೂವರು ತಲಾ 596 ಅಂಕ ಗಳಿಸುವ ಮೂಲಕ ಟಾಪರ್‌ಗಳಾಗಿ ಹೊರ ಹೊಮ್ಮಿದ್ದಾರೆ. ಈ ಪೈಕಿ ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ. ಅವರೂ ಒಬ್ಬರಾಗಿದ್ದಾರೆ.

ಕೂಡ್ಲಿಗಿ ತಾಲ್ಲೂಕು ಚೌಡಾಪುರದ ಕೃಷಿಕರಾದ ವೀರಬಸಪ್ಪ  ಮತ್ತು ವಿಶಾಲಮ್ಮ ದಂಪತಿಯ ಪುತ್ರಿ ಕವಿತಾ ಅವರು ಈ ಸಾಧನೆ ಮಾಡಿದ್ದು, ಈ ಮೂಲಕ ಕೊಟ್ಟೂರಿನ ಇಂದು ಕಾಲೇಜು ಸತತ ಒಂಭತ್ತನೇ ವರ್ಷವೂ ದ್ವಿತೀಯ ಪಿಯು ರ‍್ಯಾಂಕ್‌ ಪಟ್ಟಿಯಲ್ಲಿ ತನ್ನ ಹೆಸರನ್ನು ಉಳಿಸಿಕೊಂಡಂತಾಗಿದೆ.

ADVERTISEMENT

ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಿ ಮೂರು ವರ್ಷವಾಗಿದ್ದರೂ, ಪಿಯು ವಿಭಾಗ ಇನ್ನೂ ವಿಭಜನೆಗೊಂಡಿಲ್ಲ. ಅಖಂಡ ಬಳ್ಳಾರಿ ಜಿಲ್ಲೆ ಶೇ 74.70 ಫಲಿತಾಂಶದೊಂದಿಗೆ ರಾಜ್ಯದಲ್ಲಿ 29ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಶೇ 69.55 ಫಲಿತಾಂಶ ದಾಖಲಾಗಿತ್ತು.

ಕವಿತಾಗೆ ಪೋಷಕರಿಂದ ಸಿಹಿ ತಿನ್ನಿಸಿ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.