ADVERTISEMENT

ಮೇಕಪ್ ಇಲ್ಲದೆಯೇ ಫೋಟೊ ಪೋಸ್ಟ್ ಮಾಡಿದ ಟಿವಿ ನಟಿ ನಿಧಿ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2021, 9:07 IST
Last Updated 13 ಸೆಪ್ಟೆಂಬರ್ 2021, 9:07 IST
ಕಿರುತೆರೆ ನಟಿ ನಿಧಿ ಶಾ - ಇನ್‌ಸ್ಟಾಗ್ರಾಂ ಪೋಸ್ಟ್
ಕಿರುತೆರೆ ನಟಿ ನಿಧಿ ಶಾ - ಇನ್‌ಸ್ಟಾಗ್ರಾಂ ಪೋಸ್ಟ್    

ಬೆಂಗಳೂರು: ಅನುಪಮಾ ಟಿವಿ ಶೋ ಮೂಲಕ ಜನರ ಮನ ಗೆದ್ದಿರುವ ಕಿರುತೆರೆ ನಟಿ ನಿಧಿ ಶಾ, ಬೋಲ್ಡ್ ಫೋಟೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸ್ನಾನಗೃಹದಲ್ಲಿ ಇರುವ ಫೋಟೊವನ್ನು ನಟಿ ನಿಧಿ ಪೋಸ್ಟ್ ಮಾಡಿದ್ದು, ಅವಳು ಖುಷಿಯನ್ನು ಹೊದ್ದುಕೊಂಡಿದ್ದಾಳೆ ಮತ್ತು ಪ್ರೀತಿಯಲ್ಲಿ ನೆನೆದಿದ್ದಾಳೆ ಎಂಬ ಅಡಿಬರಹ ನೀಡಿದ್ದಾರೆ.

ನಿಧಿ ಫೋಟೊದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ADVERTISEMENT

ಜತೆಗೆ ಮೇಕಪ್ ಇಲ್ಲದ ಫೋಟೊ ಇದಾಗಿದ್ದು, ಅನುಪಮಾದ ಕಿಂಜಲ್ ಶಾ ಖ್ಯಾತಿಯ ನಿಧಿ ಶಾ, ಸಾಮಾಜಿಕ ತಾಣಗಳಲ್ಲಿ ಕೂಡ ಮಿಂಚುತ್ತಿರುತ್ತಾರೆ.

ನಿಧಿ ಅವರಿಗೆ ಅನುಪಮಾ ಶೋ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು, ಈ ಬಗ್ಗೆಯೂ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.