ADVERTISEMENT

Bigg Boss 8: ಅಚ್ಚರಿಯ ನಾಮಿನೇಶನ್‌ಗೆ ಸಾಕ್ಷಿಯಾದ ಮನೆ, ಶುಭಾಗೆ ಒಲಿದ ಅದೃಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2021, 10:17 IST
Last Updated 6 ಜುಲೈ 2021, 10:17 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್   

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್ ಮೂರನೇ ವಾರದಲ್ಲಿ ಅಚ್ಚರಿಯ ಸಾಮಿನೇಶನ್ ಆಗಿದೆ. 9 ಸದಸ್ಯರು ಈ ಬಾರಿ ನಾಮೀನೇಟ್ ಆಗಿದ್ದು, ವೀಕ್ಷಕರ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ.

ಉರುಡುಗ, ಶುಭಾ ಪೂಂಜಾ ಸೇಫ್: ಬಿಗ್ ಬಾಸ್ನಿಯಮದ ಪ್ರಕಾರ ನಾಯಕಿಯನ್ನು ನಾಮಿನೇಟ್ ಮಾಡುವಂತಿಲ್ಲ. ಹಾಗಾಗಿ,ದಿವ್ಯಾ ಉರುಡುಗ ಅವರನ್ನು ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ಸಹ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಬಿಗ್ ಬಾಸ್ ಆದೇಶದ ಮೇರೆಗೆ ನಾಯಕಿಯ ಅಧಿಕಾರ ಬಳಸಿದ ದಿವ್ಯಾ ಉರುಡುಗ ಅವರು ಶುಭಾ ಪೂಂಜಾ ಅವರನ್ನು ಸೇಫ್ ಮಾಡಿದರು. ಇದರಿಂದ ಪ್ರಶಾಂತ್ ಸಂಬರಗಿ ಅಸಮಾಧಾನ ವ್ಯಕ್ತಪಡಿಸಿದ್ದೂ ಕಂಡುಬಂದಿದೆ.

ನಿಯಮ ಬದಲಿಸಿದ್ದಾರೆಂದು ಆರೋಪಿಸಿದ ಅರವಿಂದ್, ಮಂಜು ಹೆಸರನ್ನು ನಾಮಿನೇಟ್ ಮಾಡಿದರು. ಮಂಜು ಪಾವಗಡ ಅವರಿಂದ ಗುಂಪುಗಾರಿಕೆ ನಡೆಯುತ್ತಿದೆ ಎಂದು ಶಮಂತ್ ನಾಮಿನೇಟ್ ಮಾಡಿದರೆ, ಕಾಂಪಿಟೇಟರ್ ಎಂಬ ಕಾರಣಕ್ಕೆ ರಘು, ಮಂಜು ಹೆಸರನ್ನು ಸೂಚಿಸಿದರು.

ADVERTISEMENT

ಮನೆಯಲ್ಲಿ ವಾತಾವರಣ ಹಾಳು ಮಾಡುತ್ತಾರೆ ಎಂಬ ಕಾರಣ ನೀಡಿ ಪ್ರಿಯಾಂಕಾ, ವೈಷ್ಣವಿ, ದಿವ್ಯಾ ಸುರೇಶ್, ಮಂಜು ಪಾವಗಡ ಮತ್ತಿತರರು ಚಕ್ರವರ್ತಿ ಚಂದ್ರಚೂಡ್ ಹೆಸರು ಹೇಳಿದರು. ಇದೇ ಕಾರಣಕ್ಕೆ ಪ್ರಶಾಂತ್ ಸಂಬರಗಿ ಹೆಸರು ಸಹ ಮುನ್ನಲೆಗೆ ಬಂದಿತು.

ಅವರ ನಡವಳಿಕೆ ನಾಟಕೀಯವಾಗಿದೆ ಎಂದು ದಿವ್ಯಾ ಸುರೇಶ್ ಹೆಸರನ್ನು ಅರವಿಂದ್ ಸೂಚಿಸಿದರು. ಪ್ರಶಾಂತ್ ಮತ್ತು ಚಂದ್ರಚೂಡ್ ಅವರು ಶುಭಾ ಅವರನ್ನು ನಾಮಿನೇಟ್ ಮಾಡಿದರಾದರೂ ಅವರ ಪ್ರಯತ್ನ ಫಲ ನೀಡಲಿಲ್ಲ.

ಹೀಗಾಗಿ, ಮೊದಲೇ ನಿಧಿ ಸುಬ್ಬಯ್ಯ ಅವರಿಂದ ನಾಮಿನೇಟ್ ಆಗಿದ್ದ ಕೆ.ಪಿ. ಅರವಿಂದ್ ಜೊತೆಗೆದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್, ರಘು, ವೈಷ್ಣವಿ ಮತ್ತು ಶಮಂತ್ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ವೀಕ್ಷಕರು ಹಾಕುವ ಮತಗಳ ಮೇಲೆ ಸೇಫ್ ಆಗುತ್ತಾರೆ. ಕಡಿಮೆ ಮತ ಪಡೆದವರು ಮನೆಯಿಂದ ಹೊರಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.