ADVERTISEMENT

IPL 2021: ದಾಖಲೆಯ 200ನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2021, 14:24 IST
Last Updated 20 ಸೆಪ್ಟೆಂಬರ್ 2021, 14:24 IST
   

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 200 ಪಂದ್ಯಗಳ ಮೈಲಿಗಲ್ಲು ತಲುಪಿದ್ದಾರೆ.

ಆದರೆ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವಪಂದ್ಯದಲ್ಲಿ ಕೇವಲ ಐದು ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬಲಗೈ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ ಕೃಷ್ಣ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ ವಿರಾಟ್ ಪೆವಿಲಿಯನ್‌ಗೆ ಮರಳಿದರು.

ADVERTISEMENT

ಹಾಗಿದ್ದರೂ ಐಪಿಎಲ್‌ನಲ್ಲಿ ಫ್ರಾಂಚೈಸಿಯೊಂದರ ಪರ 200 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಖ್ಯಾತಿಗೆ ವಿರಾಟ್ ಪಾತ್ರರಾಗಿದ್ದಾರೆ.

ಐಪಿಎಲ್‌ನಲ್ಲಿ ಫ್ರಾಂಚೈಸಿಯೊಂದರ ಪರ ಗರಿಷ್ಠ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿ ಇಂತಿದೆ:
ವಿರಾಟ್ ಕೊಹ್ಲಿ (ಆರ್‌ಸಿಬಿ): 200
ಮಹೇಂದ್ರ ಸಿಂಗ್ ಧೋನಿ (ಸಿಎಸ್‌ಕೆ): 182
ಸುರೇಶ್ ರೈನಾ (ಸಿಎಸ್‌ಕೆ): 172
ಕೀರನ್ ಪೊಲಾರ್ಡ್ (ಮುಂಬೈ): 172
ರೋಹಿತ್ ಶರ್ಮಾ (ಮುಂಬೈ): 162

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 200 ಪಂದ್ಯಗಳ ಮೈಲಿಗಲ್ಲು ಕ್ರಮಿಸಿದ ಐದನೇ ಆಟಗಾರ ಎನಿಸಿದ್ದಾರೆ. ಈ ಪಟ್ಟಿಯನ್ನು ಧೋನಿ (212) ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ (207), ದಿನೇಶ್ ಕಾರ್ತಿಕ್ (204) ಹಾಗೂ ಸುರೇಶ್ ರೈನಾ (201) ನಂತರದ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.