ADVERTISEMENT

ಫೈನಲ್‌ಗೆ ಕೆಲವೇ ನಿಮಿಷಗಳಿದ್ದಾಗ ಅಜ್ಜಿ ಸಾವಿನ ಸುದ್ದಿ ಕೇಳಿದ ಸಿಟ್ಸಿಪಾಸ್‌

ಫ್ರೆಂಚ್‌ ಓಪನ್ ಟೆನಿಸ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 8:04 IST
Last Updated 14 ಜೂನ್ 2021, 8:04 IST
ಸ್ಟೆಫನೊಸ್ ಸಿಟ್ಸಿಪಾಸ್‌
ಸ್ಟೆಫನೊಸ್ ಸಿಟ್ಸಿಪಾಸ್‌   

ಪ್ಯಾರಿಸ್:‌ಚೊಚ್ಚಲ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆಲುವಿನ ಕನಸಿನೊಂದಿಗೆ ಕಣಕ್ಕಿಳಿದಿದ್ದ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್‌ (22) ಅವರು ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್‌ ಜಾಕೊವಿಕ್‌ ಎದುರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದರು. ಆದರೆ, ಆ ಪಂದ್ಯಆರಂಭವಾಗುವ ಕೆಲವೇ ನಿಮಿಷಗಳ ಮೊದಲು ತಮ್ಮ ಅಜ್ಜಿ ಸಾವಿನ ಸುದ್ದಿ ಕೇಳಿ ನೋವಾಯಿತು ಎಂದು ಸಿಟ್ಸಿಪಾಸ್‌ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆಗ್ರ್ಯಾಂಡ್‌ ಸ್ಲಾಂ ಫೈನಲ್‌ ಪ್ರವೇಶಿಸಿದ್ದ ಸಿಟ್ಸಿಪಾಸ್‌, ಪಂದ್ಯವನ್ನು ಅಜ್ಜಿಗೆ ಅರ್ಪಿಸಿದ್ದಾರೆ. ಐದು ಸೆಟ್‌ಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ನಂ. 1 ಆಟಗಾರ ಜೊಕೊವಿಕ್‌6-7 (6/8), 2-6, 6-3, 6-2, 6-4 ಅಂತರದಲ್ಲಿ ಗೆಲುವು ಕಂಡಿದ್ದರು.ಆಮೂಲಕ ಅವರು ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ದಾಖಲೆ ಬರೆದರು.

ಅಜ್ಜಿಯ ಸಾವಿನ ಕುರಿತು ಬರೆದುಕೊಂಡಿರುವ ಸಿಟ್ಸಿಪಾಸ್‌, ʼಅಂಗಳ ಪ್ರವೇಶಿಸುವ ಕೆಲವು ನಿಮಿಷಗಳ ಮೊದಲು ನನ್ನ ಪ್ರೀತಿಯ ಅಜ್ಜಿ ಜೀವನದಹೋರಾಟವನ್ನು ಮುಗಿಸಿದರು. ಪ್ರಬುದ್ಧಮಹಿಳೆಯಾಗಿದ್ದ ಆಕೆ ಜೀವನದ ಮೇಲೆ ಇಟ್ಟಿದ್ದಭರವಸೆ ಹಾಗೂ ಸ್ವೀಕರಿಸುವಗುಣವನ್ನು ನಾನು ಈವರೆಗೆ ಭೇಟಿಯಾಗಿರುವ ಯಾರೊಂದಿಗೂ ಹೋಲಿಸಲಾಗದುʼ ಎಂದಿದ್ದಾರೆ.

ADVERTISEMENT

ಮುಂದುವರಿದು, ʼಈ ಜಗತ್ತಿನಲ್ಲಿ ಆಕೆಯಂತಹ ಸಾಕಷ್ಟು ಮಂದಿ ಇರುವುದು ಮುಖ್ಯವಾಗುತ್ತದೆ. ಯಾಕೆಂದರೆ, ಆಕೆಯಂತಹವರು ನಿಮ್ಮನ್ನು ಕ್ರೀಯಾಶೀಲರಾಗಿರುವಂತೆ ನೋಡಿಕೊಳ್ಳುತ್ತಾರೆ. ನೀವು ಕನಸು ಕಾಣುವಂತೆ ಮಾಡುತ್ತಾರೆʼ ಎಂದು ಭಾವುಕರಾಗಿ ಬರೆದಿದ್ದಾರೆ.

ʼಸನ್ನಿವೇಶ ಅಥವಾ ಪರಿಸ್ಥಿತಿ ಏನೇ ಇದ್ದರೂ, ಇದು ಸಂಪೂರ್ಣವಾಗಿ ಆಕೆಗೇ ಸಮರ್ಪಿತವಾದದಿನ. ನನ್ನ ತಂದೆಯನ್ನು ಬೆಳೆಸಿದ್ದಕ್ಕಾಗಿ ಧನ್ಯವಾದಗಳು. ಆತನಿಲ್ಲದೆ, ಇದು ಸಾಧ್ಯವಾಗುತ್ತಿರಲಿಲ್ಲʼ ಎಂದು ಉಲ್ಲೇಖಿಸಿದ್ದಾರೆ.

ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ಮುಖ್ಯವಾದ‌ ಹಲವು ವಿಚಾರಗಳಿವೆ ಎಂದೂ ತಿಳಿಸಿರುವ 22 ವರ್ಷದ ಆಟಗಾರ, ʼಜೀವನವೆಂದರೆ ಗೆಲ್ಲುವುದು ಅಥವಾ ಸೋಲುವುದಷ್ಟೇ ಅಲ್ಲ. ಏಕಾಂಗಿಯಾಗಿ ಆಗಲಿ ಅಥವಾಇತರರ ಜೊತೆಗೇ ಇರಲಿ ಪ್ರತಿಯೊಂದು ಕ್ಷಣವನ್ನೂ ಆನಂದಿಸುವುದಾಗಿದೆ. ಪ್ರಶಸ್ತಿ ಗೆಲ್ಲುವುದೇ ಎಲ್ಲವೂ ಅಲ್ಲʼ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.