ಗಣೇಶನ ಕಲಾಕೃತಿ
ಗಣೇಶ ಹಬ್ಬದ ನಿಮಿತ್ತ ಆಕಾಂಕ್ಷಾ ಮಹಿಳಾ ಕಲಾವಿದರ ಗುಂಪು ಸೆಪ್ಟೆಂಬರ್ 5ರಿಂದ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ‘ವಕ್ರತುಂಡ ಮಹಾಕಾಯ–2ರ’ ಪ್ರದರ್ಶನವನ್ನು ಆಯೋಜಿಸಿದೆ.
ಪ್ರಮುಖ ಕಲಾವಿದರಾದ ಇಳಯರಾಜ ಎಸ್‌ಎವಿ, ಸಂಜಯ್ ಲೋಖಂಡೆ, ವಿಕ್ಟರ್ ಬಾಲ್, ಅಶೋಕ್, ಜಯರಾಮ ಗಿಳಿಯಾಳ್, ಸಂಜಯ್ ಚಾಪೋಲ್ಕರ್ ಮತ್ತು ಶಿವಾನಂದ್ ಬಿ. ಸೇರಿದಂತೆ 75 ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಎಲ್ಲ ಬಗೆಯ ಕಲೆಗಳಲ್ಲಿಯೂ ಅರಳಬಹುದಾದ ಗಜಾನನ, ಎಲ್ಲ ಕಲಾವಿದರಿಗೂ ನೆಚ್ಚಿನ ದೇವರಾಗಿದ್ದಾರೆ. ಕಲೆಯ ವೈವಿಧ್ಯಮಯ ಪ್ರಕಾರಗಳಲ್ಲಿ ಗಣೇಶನನನ್ನು ಈ ಪ್ರದರ್ಶನದಲ್ಲಿ ನೋಡಬಹುದಾಗಿದೆ.
ವಕ್ರತುಂಡ ಮಹಾಕಾಯ ಗಣೇಶನ ಕುರಿತಾಗಿಯೇ ಇರುವ ಪ್ರದರ್ಶನವಾಗಿದೆ. ಸೆಪ್ಟೆಂಬರ್ 15ರ ವರೆಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 7.30ರ ವರೆಗೆ ನಡೆಯಲಿದೆ.
ಸಮುದಾಯದ ಅಭಿವೃದ್ಧಿಗಾಗಿ ಆಕಾಂಕ್ಷಾ ಮಹಿಳಾ ಕಲಾವಿದರ ಗುಂಪನ್ನು 2014ರಲ್ಲಿ ಕಲಾವಿದರಾರ ಉಷಾ ರೈ, ಕವಿತಾ ಪ್ರಸನ್ನ ಮತ್ತು ಶ್ಯಾಮಲಾ ರಮಾನಂದ್ ಪ್ರಾರಂಭಿಸಿದರು.
ಮಹಿಳಾ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದೆ. ಗೃಹಿಣಿಯರು, ಶಿಕ್ಷಕರು, ವಕೀಲರು, ವೈದ್ಯರು, ಸಾಫ್ಟ್‌ವೇರ್ ವೃತ್ತಿಪರರು, ಬರಹಗಾರರು ಮುಂತಾದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಮೂವರಿಂದ ಸ್ಥಾಪನೆಯಾದ ಈ ಗುಂಪಲ್ಲಿ ಇಂದು 600ಕ್ಕೂ ಹೆಚ್ಚು ಕಲಾವಿದೆಯರಿದ್ದಾರೆ.
ಈ ಗುಂಪು ಕ್ಯಾನ್ಸರ್ ರೋಗಿಗಳಿಗೆ ನಿಧಿ ಸಂಗ್ರಹಿಸುವುದು ಸೇರಿದಂತೆ ಹಲವು ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗಣೇಶನ ಕಲಾಕೃತಿ
ಗಣೇಶನ ಕಲಾಕೃತಿ
ಗಣೇಶನ ಕಲಾಕೃತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.