ಮಂಡ್ಯ: ‘ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ಬಡಿಸಬೇಕು’ ಎಂದು ಆಗ್ರಹಿಸುತ್ತಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರು ಶನಿವಾರ ಸಮ್ಮೇಳನ ಸ್ಥಳದಲ್ಲಿ ಬಾಡೂಟ ಸವಿದರು.
ಮಧ್ಯಾಹ್ನ ‘ಬಾಡೂಟ ಬಳಗ’ದ ಕೆಲವು ಸದಸ್ಯರು ಸಮ್ಮೇಳನದ ಆಹಾರ ಕೌಂಟರ್‌ನಲ್ಲಿ ನೀಡಿದ ಅನ್ನವನ್ನು, ಮನೆಯಿಂದ ತಾವು ತಂದಿದ್ದ ಬೋಟಿ ಗೊಜ್ಜಿನೊಂದಿಗೆ ಸೇವಿಸಿದರು. ಕೆಲವರು ಮೊಟ್ಟೆ ಮತ್ತು ಚಿಕನ್ ಬಿರಿಯಾನಿ ತಂದು ಸೇವಿಸಿದರು. ಕೆಲವರು ಸಮ್ಮೇಳನದಲ್ಲಿ ‘ಇದು ಆಹಾರ ಅಸಮಾನತೆ ಎತ್ತಿ ಹಿಡಿದ ಸಮ್ಮೇಳನ’ ಎಂದ ಬ್ಯಾಡ್ಜ್ ಧರಿಸಿ ಓಡಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.