ADVERTISEMENT

ಪೂರ್ವಿಕರ ಫೋಟೊಗಳನ್ನು ಮನೆಯಲ್ಲಿ ಇಡಬೇಕಾ, ಬೇಡ್ವಾ: ಇದರ ಹಿಂದಿನ ಉದ್ದೇಶವೇನು?

ಎಲ್.ವಿವೇಕಾನಂದ ಆಚಾರ್ಯ
Published 11 ಅಕ್ಟೋಬರ್ 2025, 6:00 IST
Last Updated 11 ಅಕ್ಟೋಬರ್ 2025, 6:00 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಕೆಲವರು ಮನೆಗಳಲ್ಲಿ ಹಿರಿಯರ ಫೋಟೊಗಳನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ತೂಗು ಹಾಕುತ್ತಾರೆ. ಅವರನ್ನು ಪ್ರತಿನಿತ್ಯ ಪೂಜಿಸುತ್ತಾರೆ. ಅವರ ಆಶೀರ್ವಾದದಿಂದಲೇ ನಮಗೆಲ್ಲ ಲಭಿಸಿದೆ ಎಂದು ಹೇಳುತ್ತಾರೆ. ಆದರೆ, ಇದು ಶಾಸ್ತ್ರಕ್ಕೆ ಸಮ್ಮತವಲ್ಲ ಎಂದು ಜ್ಯೋತಿಷ ಹೇಳುತ್ತದೆ. 

ತೀರಿ ಹೋದವರಿಗೆ ಮನೆಯಲ್ಲಿ ಸ್ಥಳವನ್ನು ನಿಗದಿಪಡಿಸಲು ಹೇಗೆ ಸಾಧ್ಯ? ಒಬ್ಬ ವ್ಯಕ್ತಿ ತೀರಿ‌ ಹೋದ ಮೇಲೆ ಅವರ ಲೋಕ‌ ಬದಲಾಗುತ್ತದೆ.  ಭೂಮಿಯ ಗುರುತ್ವಾಕರ್ಷಣ ವಲಯದಿಂದ ಆಚೆಗೆ ಅವರ ಆತ್ಮ ಹೋಗಬೇಕು. ಇಲ್ಲವಾದರೆ ಅದು ಪ್ರೇತಾತ್ಮವಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. 

ADVERTISEMENT

ಪಿತೃಗಳು ಮೋಕ್ಷ ಹೊಂದಬೇಕು. ಮೋಕ್ಷ ಹೊಂದದೆ ಇದ್ದರೆ ಸ್ವರ್ಗಲೋಕ, ನರಕ ಲೋಕ, ಪಿತೃಲೋಕ, ಚಂದ್ರಲೋಕ, ,ಸೋಮ ಲೋಕ‌, ಹೀಗೆ ಯಾವುದಾದರೂ ಒಂದು ಲೋಕದಲ್ಲಿ‌ ಇರಬೇಕು. ಅಥವಾ ಪುನರ್ ಜನ್ಮ ಪಡೆಯಬೇಕು ಎನ್ನುತ್ತೆ ಜ್ಯೋತಿಷ.

ಹಿರಿಯರ ಪೋಟೊ ಮನೆಯಲ್ಲಿ ಇಡುವ ಉದ್ದೇಶವೇನು? 

ಹಿರಿಯರ ಪೋಟೊದಲ್ಲಿ ಆತ್ಮ ಇರುತ್ತಾ? ಖಂಡಿತ ಇಲ್ಲ, ಭಾವಚಿತ್ರ ನೇತು ಹಾಕುವ ಹಿಂದಿನ ಉದ್ದೇಶ. ನಮ್ಮ ಹಿರಿಯರ ಬಗ್ಗೆ ಮುಂದಿನ ಪೀಳಿಗೆಗೆ ಅರಿವಿರಲಿ ಎಂಬುದಾಗಿದೆ. ಆದ್ದರಿಂದ ಪೋಟೊವನ್ನು ಇಡಬಾರದು. ಇಡಲೇಬೇಕು ಎಂಬ ಯಾವ ನಿಯಮವು ಇಲ್ಲವೆಂದು ಜ್ಯೋತಿಷ ಹೇಳುತ್ತದೆ. 

ಸತ್ತ ಮೇಲೆ ತಿಥಿ, ಶ್ರಾದ್ದ ಇತ್ಯಾದಿಗಳನ್ನು ದಕ್ಷಿಣ ದಿಕ್ಕಿನಲ್ಲಿ ಮಾಡಲಾಗುತ್ತದೆ. ದಕ್ಷಿಣ ದಿಕ್ಕು ನಮ್ಮ ಮನೆಯ ದಿಕ್ಕು ಆಗುವುದಿಲ್ಲ. ಬದಲಾಗಿ ಭೂಮಂಡಲದ ಆಚೆಗಿರುವ ಬೇರೆ ಲೋಕದ ದಿಕ್ಕು ಎಂದು ಜ್ಯೋತಿಷ ಹೇಳುತ್ತದೆ. 

ಅಂಗವಿಕಲರಾಗಿ ಹುಟ್ಟುವುದು, ಬುದ್ಧಿಮಾಂದ್ಯರಾಗಿ ಜನಿಸುವುದು ಇದನ್ನೇ ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮಫಲ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.