
ಉಂಗುರ ಧರಿಸಲು ಅನೇಕರು ಇಷ್ಟಪಡುತ್ತಾರೆ. ಆದರೆ ಯಾವ ಬೆರಳಿಗೆ ಅದನ್ನು ಹಾಕಬೇಕು ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಜ್ಯೋತಿಷ ಶಾಸ್ತ್ರದ ಯಾವ ಬೆರಳಿಗೆ ಉಂಗುರ ಧರಿಸಿದರೇ ಸೂಕ್ತ ಎಂಬುವುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಮಾಹಿತಿ ನೀಡಿದ್ದಾರೆ.
ಚಿನ್ನವನ್ನು ಲಕ್ಷ್ಮಿ ದೇವಿಯ ಶುಭ ಫಲದ ಸಂಕೇತ ಎಂದು ಹೇಳಲಾಗುತ್ತದೆ. ಇದನ್ನು ಹಬ್ಬ ಮತ್ತು ಶುಭ ಸಂದರ್ಭಗಳಲ್ಲಿ ಧರಿಸುತ್ತಾರೆ. ಚಿನ್ನ ಧರಿಸುವುದರಿಂದ ಮನೆಗೆ ಸಂತೋಷ ತರುತ್ತದೆ ಎಂದು ನಂಬಲಾಗಿದೆ. ಮಾತ್ರವಲ್ಲ, ಧೈರ್ಯ ದೃಢಸಂಕಲ್ಪ ಹೆಚ್ಚಾಗುತ್ತದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.
ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಜ್ಯೋತಿಷಿಗಳು ಚಿನ್ನ ಧರಿಸಲು ಸಲಹೆ ನೀಡುತ್ತಾರೆ. ಇದರಿಂದ ದೇಹ ಮತ್ತು ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.
ಚಿನ್ನದ ಉಂಗುರವನ್ನು ಉಂಗುರದ ಬೆರಳಿಗೆ ಧರಿಸುವುದರಿಂದ ಈ ಬೆರಳಿನ ನರಗಳು ನೇರವಾಗಿ ಹೃದಯಕ್ಕೆ ಸಂಪರ್ಕ ಹೊಂದಿವೆ ಎಂದು ಹೇಳಲಾಗಿದೆ.
ನಿಶ್ಚಿತಾರ್ಥದ ಸಮಯದಲ್ಲಿ ಉಂಗುರವನ್ನು ನಾಲ್ಕನೇ ಬೆರಳಿಗೆ ಧರಿಸಿವುದರಿಂದ ಗಂಡು ಹೆಣ್ಣಿನ ಸಂಬಂಧ ಗಟ್ಟಿಯಾಗುತ್ತದೆ ಎಂದು ಹೇಳಲಾಗಿದೆ. ಚಿನ್ನದ ಉಂಗುರವನ್ನು ಕಿರು ಬೆರಳಿಗೂ ಸಹ ಧರಿಸಬಹುದು.
ಚಿನ್ನದ ಉಂಗುರವನ್ನು ಮಧ್ಯದ ಬೆರಳಿಗೆ ಧರಿಸುವುದು ಅಶುಭ:
ಜ್ಯೋತಿಷದ ಪ್ರಕಾರ, ಮಧ್ಯದ ಬೆರಳನ್ನು ಶನಿಗೆ ಸಂಬಂಧಿಸಿದ್ದು, ಈ ಬೆರಳಿಗೆ ಚಿನ್ನದ ಉಂಗುರ ಧರಿಸುವುದರಿಂದ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಕರಾತ್ಮಕತೆ ಉಂಟಾಗಿ ಹಣದ ಸಮಸ್ಯೆ ಎದುರಿಸಬೇಕಾಗುತ್ತದೆ.
ಹೆಬ್ಬೆರಳಿಗೆ ಉಂಗುರ ಧರಿಸಿರುವುದನ್ನು ಇಷ್ಟಪಟ್ಟರೆ ಅಂತವರು ಚಿನ್ನದ ಬದಲಿಗೆ ಬೆಳ್ಳಿಯ ಉಂಗುರವನ್ನು ಧರಿಸಿದರೆ ಉತ್ತಮ. ಏಕೆಂದರೆ ಈ ಹೆಬ್ಬೆರಳು ಚಂದ್ರನಿಗೆ ಸಂಬಂಧಿಸಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಬಗೆಹರಿಯುತ್ತದೆ ಮತ್ತು ಶುಭ ಫಲ ಉಂಟಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.