ADVERTISEMENT

ಹೆಣ್ಣು ಮಗುನಿನಲ್ಲಿ ಹುಟ್ಟು ಮಚ್ಚೆ ಇದ್ದರೆ ದೊರೆಯುವ ಲಾಭವೇನು? ಇಲ್ಲಿದೆ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 19 ನವೆಂಬರ್ 2025, 2:09 IST
Last Updated 19 ನವೆಂಬರ್ 2025, 2:09 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>
   

ಪ್ರಜಾವಾಣಿ ಚಿತ್ರ

ಮನುಷ್ಯನಿಗೆ ಹುಟ್ಟಿನಿಂದಲೇ ದೇಹದ ಮೇಲೆ ಕೆಲವು ಚಿನ್ಹೆಗಳಿರುತ್ತವೆ. ಅವುಗಳನ್ನು ಮಚ್ಚೆ ಎಂದು ಕರೆಯಲಾಗುತ್ತದೆ. ಜಾತಕದ ಅನುಸಾರ ಮಚ್ಚೆಗಳು ಮನುಷ್ಯನಿಗೆ ಒಳಿತು ಕೆಡುಕುಗಳನ್ನು ಮಾಡುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಹೆಣ್ಣು ಮಕ್ಕಳ ಕೆಲವು ಮಚ್ಚೆಗಳು ಏನ್ನನು ಸೂಚಿಸುತ್ತವೆ ಎಂಬುದನ್ನು ನೋಡೋಣ.

  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಟ್ಟು ಮಚ್ಚೆ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಹೆಣ್ಣು ಮಗುವಿಗೆ ಎರಡು ಕೆನ್ನೆಯ ಮೇಲೆ ಮಚ್ಚೆ ಇದ್ದರೆ, ಆ ಹೆಣ್ಣು ಮಗಳು ಮದುವೆಯಾಗಿ ಹೋಗುವ ಮನೆ ಸಮೃದ್ದವಾಗಿರಲಿದೆ ಎಂಬ ನಂಬಿಕೆ ಇದೆ. 

    ADVERTISEMENT
  • ಅವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನದ ಜೊತೆಗೆ ಪ್ರಶಂಸೆ, ಗೌರವಗಳು ಲಭಿಸುತ್ತವೆ.

  • ಕೈ ಮೇಲೆ ಕೆಂಪು ಬಣ್ಣದ ಹುಟ್ಟು ಮಚ್ಚೆ ಇದ್ದರೆ ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ.

  • ಹಣೆಯ ಬಲಭಾಗದಲ್ಲಿ ಹುಟ್ಟು ಮಚ್ಚೆ ಇದ್ದರೆ ಯಶಸ್ಸು ದೊರೆಯುತ್ತದೆ. ಎಡ ಭಾಗದ ಹಣೆಯ ಮೇಲೆ ಮಚ್ಚೆ ಇದ್ದರೆ ಸಾಧಾರಣ ಫಲಿತಾಂಶ ದೊರೆಯುತ್ತದೆ.

  • ಕೆಳ ತುಟಿಯ ಮೇಲೆ ಹುಟ್ಟು ಮಚ್ಚೆ ಇದ್ದರೆ ಇಂಥವರು ಭೋಜನ ಪ್ರಿಯರು ಹಾಗೂ ಒಳ್ಳೆಯ ಸ್ನೇಹಿತರನ್ನು ಸಂಪಾದಿಸುತ್ತಾರೆ.

  • ನಾಲಿಗೆಯ ಮೇಲೆ ಹುಟ್ಟು ಮಚ್ಚೆ ಇದ್ದರೆ ಒಳ್ಳೆಯ ಸಂಗೀತಗಾರರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

  • ಹೆಣ್ಣು ಮಕ್ಕಳಿಗೆ ಎಡಗಡೆ ದವಡೆಯ ಮೇಲೆ ಮಚ್ಚೆ ಇದ್ದರೆ, ಇವರು ಸಾಧಾರಣ ಜೀವನ ನಡೆಸುತ್ತಾರೆ. ಬಲಭಾಗದ ದವಡೆಯ ಮೇಲೆ ಮಚ್ಚೆ ಇದ್ದರೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಾರೆ ಎಂದು ಹೇಳಲಾಗುತ್ತದೆ.

  • ಹೆಣ್ಣು ಮಕ್ಕಳಿಗೆ ಮೂಗಿನ ಮೇಲೆ ಮಚ್ಚೆ ಇದ್ದರೆ ಹಠದ ಸ್ವಭಾವದವರಾಗಿರುತ್ತಾರೆ. ಅಂದುಕೊಂಡ ಕೆಲಸವನ್ನು ಮಾಡಿಯೇ ಮುಗಿಸುತ್ತಾರೆ.

  • ಮೂಗಿನ ಕೊನೆಯ ತುದಿಯ ಮೇಲೆ ಹುಟ್ಟು ಮಚ್ಚೆ ಇದ್ದರೆ, ಅದೃಷ್ಟ ಕೂಡಿ ಬರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.