
ಚಿತ್ರ: ಗೆಟ್ಟಿ
ಮಧ್ಯಾಹ್ನ ನಿದ್ದೆ ಮಾಡುವುದನ್ನು ಹಗಲು ನಿದ್ದೆ ಎಂದು ಶಾಸ್ತ್ರದಲ್ಲಿ ಕರೆಯಲಾಗುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದ ನಡುವೆ ನಿದ್ದೆ ಮಾಡುವುದರಿಂದ ಹಲವು ದೋಷಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಹಗಲು ನಿದ್ದೆ ಮಾಡುವುದರಿಂದ ಏನೆಲ್ಲಾ ದೋಷಗಳು ಉಂಟಾಗುತ್ತವೆ ಎಂಬುದನ್ನು ನೋಡೋಣ.
ಹಗಲು ನಿದ್ದೆ ಮಾಡುವುದರಿಂದ ನವ ಗ್ರಹಗಳು ನಮ್ಮ ರಾಶಿಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತವೆ ಎಂದು ಹೇಳಲಾಗುತ್ತದೆ.
ಇದು ಆರೋಗ್ಯದಂತಹ ಸಮಸ್ಯೆ ಹಾಗೂ ದಾರಿದ್ರ್ಯಕ್ಕೂ ಕಾರಣವಾಗಬಹುದು.
ವಯೋಸಹಜ ಕಾಯಿಲೆ ಇರುವವರು, ವೃದ್ಧರು, ಎಳೆಯ ಮಕ್ಕಳು ಹಾಗೂ ರೋಗಿಗಳು ಹಗಲು ನಿದ್ದೆ ಮಾಡಬಹುದು. ಆದರೆ ಊಟ ಮಾಡಿದ ತಕ್ಷಣ ಮಲಗುವುದು ಶುಭಕರವಲ್ಲ ಎಂದು ಶಾಸ್ತ್ರ ಹೇಳುತ್ತದೆ.
ಸೂರ್ಯೋದಕ್ಕೆ ಮುನ್ನ ಏಳುವುದು ಮತ್ತು ರಾತ್ರಿ ಸಮಯದಲ್ಲಿ ಮಾತ್ರ ನಿದ್ದೆ ಮಾಡುವುದು ಪ್ರಕೃತಿ ನಿಯಮವಾಗಿದೆ.
ಹಗಲು ನಿದ್ದೆ ಮಾಡಿ ರಾತ್ರಿ ಸಮಯದಲ್ಲಿ ಬಹಳ ಹೊತ್ತು ಎಚ್ಚರವಿರುವುದರಿಂದ ಜೀವನದಲ್ಲಿ ಋಣಾತ್ಮಕತೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದೇಳುವುದರಿಂದ ಮನಸ್ಸು ಹಾಗೂ ದೇಹ ಎರಡೂ ಉಲ್ಲಾಸದಿಂದ ಕೂಡಿರುತ್ತವೆ. ಧ್ಯಾನ, ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.