
ಚಿತ್ರ: ಗೆಟ್ಟಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನು ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಮಾಸ ದೇವರ ಪೂಜೆಗೆ ಮಾತ್ರ ಸಿಮೀತವಾಗಿರುವುದರಿಂದ ಯಾವುದೇ ಶುಭ ಕಾರ್ಯ ಮಾಡಬಾರದೆಂದು ಹೇಳಲಾಗುತ್ತದೆ. ಹಾಗಾದರೆ ಈ ಮಾಸದಲ್ಲಿ ಜನ್ಮದಿನ ಹಾಗೂ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಹುಟ್ಟುಹಬ್ಬ ಆಚರಣೆ
ಈ ಮಾಸದಲ್ಲಿ ಹುಟ್ಟು ಹಬ್ಬದ ಆಚರಣೆ ಅಷ್ಟು ಶುಭಕರವಲ್ಲ ಎಂದು ಜ್ಯೋತಿಷ ಹೇಳುತ್ತದೆ. ಒಂದು ವೇಳೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರೆ ಅಶುಭ ಫಲ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದು ಹಲವು ಸಮಸ್ಯೆಗೆ ಕಾರಣವಾಗಬಹುದು.
ಪ್ರಮುಖವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ವ್ಯಕ್ತಿಗೆ ಆರೋಗ್ಯ ಸಮಸ್ಯೆ, ಆಯುಷ್ಯ ಕಡಿಮೆಯಾಗಬಹುದು. ಆಚರಣೆಯ ಬದಲು ಹುಟ್ಟುಹಬ್ಬದ ದಿನ ಧನುರ್ಮಾಸದ ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗಿ ಬರುವುದು ಒಳ್ಳೆಯದು
ನಿಮ್ಮ ಹುಟ್ಟುಹಬ್ಬವನ್ನು ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಸಿಹಿ ಹಂಚಿ ಆಚರಣೆ ಮಾಡುವುದು ಸೂಕ್ತವಾಗಿದೆ. ಮದ್ಯ, ಮಾಂಸ, ಮೋಜ ಮಸ್ತಿ ಮಾಡುವುದರ ಬದಲು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಇಷ್ಟ ದೇವರನ್ನು ಆರಾಧಿಸಿ, ಗೋವುಗಳಿಗೆ ಆಹಾರ ನೀಡಬೇಕು. ಸಾಧ್ಯವಾದರೆ, ಬಡವರಿಗೆ ಧಾನ ನೀಡುವುದು ಶುಭಕರವಾಗಿದೆ.
ಹುಟ್ಟು ಹಬ್ಬದ ಆಚರಣೆ ವೈಯಕ್ತಿಕವಾದದ್ದು. ಜ್ಯೋತಿಷದಲ್ಲಿ ಇದನ್ನು ಕೂಡಾ ಶುಭಕಾರ್ಯವೆಂದೇ ಪರಿಗಣಿಸಲಾಗುತ್ತದೆ. ಆದರೆ ಆಚರಣೆ ಮಾಡಲೇಬಾರದು ಎಂಬ ನಿಯಮವಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಸರಳವಾಗಿ ಆಚರಣೆ ಮಾಡುವುದು ಉತ್ತಮ.
ಹುಟ್ಟು ಹಬ್ಬಕ್ಕೆ ಮನೆಯಲ್ಲಿ ಈ ಆಹಾರ ತಯಾರಿಸಿ
ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿಯಿಂದ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಮನೆಯಲ್ಲಿ ಹುಗ್ಗಿ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಸೇವಿಸಿ. ಜೊತೆಗೆ ಕರಿಮೆಣಸು, ಜೀರಿಗೆ, ಶುಂಠಿ ಮತ್ತು ತುಪ್ಪ ದೇಹಕ್ಕೆ ಉಷ್ಣತೆ ನೀಡುವುದರ ಜೊತೆಗೆ ಕಫ ಹಾಗೂ ಶೀತವನ್ನು ತಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.