
ಎಐ ಚಿತ್ರ
2025ರ ಮುಕ್ತಾಯಕ್ಕೆ ಇನ್ನೊಂದು ತಿಂಗಳು ಬಾಕಿ ಉಳಿದಿದೆ. ಡಿಸೆಂಬರ್ ತಿಂಗಳಲ್ಲಿ ಕೆಲವು ರಾಶಿಗಳಿಗೆ ಗುರು ಬಲವಿದ್ದು, ಒಳ್ಳೆಯದಾಗಲಿದೆ ಎಂದು ಜ್ಯೋತಿಷ ತಿಳಿಸಿದೆ. ಈ ತಿಂಗಳಿನಲ್ಲಿ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ನೋಡೋಣ.
ವೃಷಭ ರಾಶಿ:
ಗುರು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಶುಭವಾಗಲಿದೆ. ಈ ರಾಶಿಯವರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಧನ ಲಾಭವಾಗಲಿದೆ.
ಈ ರಾಶಿಯಲ್ಲಿ ಶನಿ ಹತ್ತನೇ ಮನೆಯಲ್ಲಿರುವುದರಿಂದ ಶುಭವಾಗಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯಾಗಲಿದೆ. ಆಸ್ತಿ ಸಂಪಾದನೆ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಹಾಗೂ ಧನ ಲಾಭ ಉಂಟಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ.
ತುಲಾ ರಾಶಿ:
ಗುರು ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿರುವುದರಿಂದ ವ್ಯಾಪಾರ, ವ್ಯವಹಾರಗಳಲ್ಲಿ ಧನ ಲಾಭ ದೊರೆಯಲಿದೆ. ಕುಟುಂಬದ ಆರೋಗ್ಯದಲ್ಲಿ ಸುಧಾರಣೆ, ಬಂದು ಮಿತ್ರರ ಸಹಾಯ, ಪುಣ್ಯಕ್ಷೇತ್ರ ದರ್ಶನ ಹಾಗೂ ಶುಭ ಕಾರ್ಯಗಳು ನಡೆಯುವುದನ್ನು ನಿರೀಕ್ಷಿಸಬಹುದು.
ಶನಿ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಶುಭ ದೊರೆಯುತ್ತದೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಗೌರವ, ವ್ಯಾಪಾರದಲ್ಲಿ ಲಾಭ, ಕೃಷಿಯಲ್ಲಿ ಅಭಿವೃದ್ಧಿ ಹಾಗೂ ಸರಕಾರಿ ಕೋರ್ಟು,ಕಚೇರಿಗಳ ವ್ಯವಹಾರಗಳಲ್ಲಿ ತೀರ್ಮಾನ ದೊರೆಯಬಹುದು.
ಕುಂಭ ರಾಶಿ:
ಗುರು ಮಿಥುನ ರಾಶಿಯಲ್ಲಿ ಇರುವುದರಿಂದ ಶುಭದಾಯಕನಾಗಿದ್ದು, ಆರೋಗ್ಯದಲ್ಲಿ ಸುಧಾರಣೆ. ಸಜ್ಜನರ ಸಹವಾಸ, ಧನದ ಆಗಮನ, ಕುಟುಂಬದಲ್ಲಿ ಉತ್ತಮವಾದ ವಾತಾವರಣ ,ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಹಾಗೂ ಮೊದಲಾದ ಫಲ ದೊರೆತಯುತ್ತವೆ.
ಧನಸ್ಸು ರಾಶಿ:
ಮಿಥುನ ರಾಶಿಯಲ್ಲಿ ಗುರು ಸಂಚರಿಸುತ್ತಿರುವುದರಿಂದ ಕುಟುಂಬದಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ, ಶುಭ ಕಾರ್ಯಗಳು ನಡೆಯುವಿಕೆ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಮೊದಲಾದ ಶುಭ ಫಲಗಳನ್ನು ನೀರಿಕ್ಷಿಸಬಹುದು.
ಸಿಂಹ ರಾಶಿ:
ಗುರು ಮಿಥುನ ರಾಶಿಯಲ್ಲಿ ಇರುವುದರಿಂದ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಪ್ರಯತ್ನಕ್ಕೆ ತಕ್ಕ ಪ್ರತಿಫಲ, ಆರೋಗ್ಯದ ಸ್ಥಿತಿಯಲ್ಲಿ ಸುಧಾರಣೆ, ಮಂಗಳ ಕಾರ್ಯಗಳು ನಡೆಯುವಿಕೆ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ.
ಕರ್ಕ ರಾಶಿ:
ಗುರು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ವ್ಯಾಪಾರ ಉದ್ಯೋಗಗಳಲ್ಲಿ ಪ್ರಗತಿ, ಬಂಧು–ಮಿತ್ರರ ವಿರೋಧ, ಸ್ಥಳ ಬದಲಾವಣೆ, ಪ್ರಯಾಣದಲ್ಲಿ ತೊಂದರೆ ಹಾಗೂ ಇತರೆ ಸಮಸ್ಯೆಯಾಗಲಿವೆ ಎಂದು ಜ್ಯೋತಿಷ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.