ADVERTISEMENT

ಗಮನಿಸಿ: ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಈ ವಸ್ತುಗಳನ್ನು ನೋಡುವುದು ತಪ್ಪಿಸಿ

ಎಲ್.ವಿವೇಕಾನಂದ ಆಚಾರ್ಯ
Published 12 ನವೆಂಬರ್ 2025, 5:27 IST
Last Updated 12 ನವೆಂಬರ್ 2025, 5:27 IST
<div class="paragraphs"><p>ಚಿತ್ರ: ಗೆಟ್ಟಿ ಚಿತ್ರ</p></div>
   

ಚಿತ್ರ: ಗೆಟ್ಟಿ ಚಿತ್ರ

ರಾತ್ರಿ ಮಲಗುವ ಮುನ್ನ ಹಾಗೂ ಎದ್ದ ತಕ್ಷಣ ಕೆಲವು ವಸ್ತುಗಳನ್ನು ನೋಡಬಾರದು ಎಂಬ ನಂಬಿಕೆ ಇದೆ. ಹಾಗಾದರೆ ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕು, ಯಾವುದನ್ನು ನೋಡಬಾರದು ಎಂಬುದರ ಮಾಹಿತಿ ಇಲ್ಲಿದೆ. 

ಯಾವ ವಸ್ತುಗಳನ್ನು ನೋಡಬಾರದು: 

ADVERTISEMENT
  • ರಾತ್ರಿ ಮಲಗುವಾಗ ಒದ್ದೆ ಕಾಲಿನಲ್ಲಿ ಮಲಗಬಾರದು. ಬೆಳಿಗ್ಗೆ ಎದ್ದ ತಕ್ಷಣ ಬೇರೆಯವರ ಕಾಲುಗಳನ್ನು ನೋಡುವುದರಿಂದ ಆ ದಿನ ವ್ಯಾಪಾರ, ಉದ್ಯೋಗದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ.

  • ಎದ್ದ ತಕ್ಷಣ ಜಗಳ ಮಾಡುತ್ತಿರುವ ವ್ಯಕ್ತಿಗಳನ್ನು ನೋಡಬಾರದು. ಇದರಿಂದ ಆ ದಿನದ ಮಾನಸಿಕ ಶಾಂತಿಗೆ ಧಕ್ಕೆ ಉಂಟಾಗುತ್ತದೆ.

  • ಎದ್ದ ತಕ್ಷಣ ಕೂದಲು ಕಟ್ಟದೇ ಇರುವ ಮಹಿಳೆ ಹಾಗೂ ಚಪ್ಪಲಿ ನೋಡಿದರೆ ಅನಾರೋಗ್ಯ ಮತ್ತು ಮಾನಸಿಕ ಚಿಂತೆ ಕಾಡುತ್ತದೆ ಎಂದು ಹೇಳಲಾಗುತ್ತದೆ.

  • ಎದ್ದ ತಕ್ಷಣ ಹೊರಗೆ ಬಂದು ಆಕಾಶ ನೋಡುವುದು ಕೂಡಾ ನಷ್ಟದ ಕಡೆಗೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತದೆ. 

ಯಾವ ವಸ್ತುಗಳನ್ನು ನೋಡಬಹುದು: 

  • ಬೆಳಗ್ಗೆ ಎದ್ದ ತಕ್ಷಣ ಭೂತಾಯಿಯನ್ನು ಸ್ಪರ್ಶಿಸಿ, ನಮಸ್ಕರಿಸುವುದರಿಂದ ದೀರ್ಘಾಯುಷ್ಯ  ಪ್ರಾಪ್ತಿಯಾಗುತ್ತದೆ.

  • ಗೋವಿನ ದರ್ಶನ ಮಾಡುವುದರಿಂದ ನಿಮ್ಮ ಪಾಪಗಳು ಕಳೆಯುತ್ತವೆ. ಗೋವಿನ ಪ್ರತಿಮೆ ಅಥವಾ ಚಿತ್ರಪಟ ನೋಡಿದರೂ ಒಳಿತು ಉಂಟಾಗುತ್ತದೆ ಎಂಬ ನಂಬಿಕೆ ಇದೆ. 

  • ಬೆಳಿಗ್ಗೆ ಎದ್ದಾಗ ಬಿಲ್ವಪತ್ರೆ ಮರ ನೋಡಿ ದಿನ ಪ್ರಾರಂಭಿಸಿದರೆ, ಆ ದಿನ ನಿಮಗೆ ಆರೋಗ್ಯ, ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ.

  • ಬೆಳಿಗ್ಗೆ ಎದ್ದಾಗ ನದಿ, ಹರಿಯುವ ನೀರು ಹಾಗೂ ಕಲ್ಪವೃಕ್ಷ ನೋಡುವುದರಿಂದ ಧನ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.