ಚಿತ್ರ:ಎಐ
ತುಳಸಿ ಪೂಜೆಯಿಂದ ಇಷ್ಟಾರ್ಥಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ. ಆದರೆ, ಲಕ್ಷ್ಮೀ ನಾರಾಯಣನ ಪ್ರತೀಕವಾಗಿರುವ ತುಳಸಿ ಗಿಡ ಮನೆಯ ಆವರಣದಲ್ಲಿದ್ದರೆ ಕೆಲವು ತಪ್ಪುಗಳು ಆಗದಂತೆ ಎಚ್ಚರವಹಿಸುವುದು ಮುಖ್ಯ.
ತುಳಸಿ ಗಿಡದ ಕೆಳ ಭಾಗದಲ್ಲಿ ಎಲ್ಲಾ ನದಿಗಳು ವಾಸವಾಗಿರುತ್ತವೆ ಎಂಬ ನಂಬಿಕೆ ಇದೆ. ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ ಹಾಗೂ ಕಾವೇರಿ ಸೇರಿದಂತೆ ಹಲವು ಪುಣ್ಯ ನದಿಗಳ ವಾಸಸ್ಥಾನವೆಂದು ಹೇಳಲಾಗುತ್ತದೆ.
ಆದ್ದರಿಂದ ಸ್ನಾನ ಮಾಡುವ ಸಮಯದಲ್ಲಿ, ನೀರಿಗೆ ಒಂದು ಚಿಟಕಿ ತುಳಸಿ ಗಿಡದ ಮಣ್ಣು ಹಾಕಿಕೊಂಡು ಸ್ನಾನ ಮಾಡಿದರೆ ಪುಣ್ಯ ನದಿಯಲ್ಲಿ ಸ್ನಾನ ಮಾಡಿದಷ್ಟು ಪವಿತ್ರ ಸ್ನಾನವಾಗುತ್ತದೆ ಎಂಬ ನಂಬಿಕೆ ಇದೆ.
ತುಳಸಿ ಗಿಡದ ಮಧ್ಯಭಾಗದಲ್ಲಿ ಲಕ್ಷ್ಮೀ ನಾರಾಯಣ ಹಾಗೂ ಎಲ್ಲಾ ದೇವತೆಗಳು ವಾಸವಿರುತ್ತಾರೆ. ಋಷಿಮುನಿಗಳ ಗಂಧರ್ವ ವಾಸ ಕೂಡ ಇರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಎಲ್ಲ ದೇವತೆಗಳನ್ನು ಒಟ್ಟಾಗಿ ಪೂಜಿಸಿದಷ್ಟು ಮಹಾಪುಣ್ಯ ಪ್ರಾಪ್ತಿಯಾಗುತ್ತದೆ.
ತುಳಸಿ ಸಂಪತ್ತು ಮತ್ತು ಸೌಭಾಗ್ಯದ ಸಂಕೇತ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ಮನೆಯ ಮುಂಭಾಗದಲ್ಲಿ ತುಳಸಿ ಗಿಡವಿದ್ದರೆ ವಾಸ್ತುದೋಷ ಪರಿಹಾರವಾಗುತ್ತದೆ.
ತುಳಸಿ ಗಿಡದಿಂದ ಮನೆಯಲ್ಲಿ ಆರೋಗ್ಯ ಭಾಗ್ಯ, ಸುಖ, ಸಂತೋಷ ಹಾಗೂ ಶಾಂತಿ ನೆಲೆಸುತ್ತದೆ.
ಮನೆಯಲ್ಲಿ ತುಳಸಿ ಇರುವುದರಿಂದ ಮನೆಯ ವಾತಾವರಣ ಧನಾತ್ಮಕವಾಗಿರುತ್ತದೆ ಎಂದು ಹೇಳಲಾಗುತ್ತದೆ.
ತುಳಸಿಯಲ್ಲಿ ಲಕ್ಷ್ಮೀ ತುಳಸಿ ಹಾಗೂ ವಿಷ್ಣು ತುಳಸಿ ಎಂಬ ಎರಡು ವಿಧಗಳಿವೆ. ಈ ಎರಡು ತುಳಸಿಗಳನ್ನು ಪೂಜಿಸಿದರೆ ಮಾತ್ರ ಲಕ್ಷ್ಮೀ ನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.