
ಎಐ ಚಿತ್ರ
ತಿಂಗಳಿಗೆ ಎರಡು ಚತುರ್ಥಿಗಳು ಬರುತ್ತವೆ. ಅವುಗಳಲ್ಲಿ ಹುಣ್ಣಿಮೆಯ ನಂತರ ಬರುವುದನ್ನು ‘ಸಂಕಷ್ಟಹರ ಚತುರ್ಥಿ’ ಎಂತಲೂ ಹಾಗೂ ಅಮಾವಾಸ್ಯೆ ಬಳಿಕ ಬರುವುದನ್ನು ‘ವಿನಾಯಕ ಚತುರ್ಥಿ’ ಎಂದೂ ಕರೆಯಲಾಗುತ್ತದೆ. ಸಂಕಷ್ಟಹರ ಚತುರ್ಥಿಯ ಮಹತ್ವ ಹಾಗೂ ಅದರ ಆಚರಣೆಯಿಂದಾಗುವ ಲಾಭಗಳೇನು ಎಂಬುದನ್ನು ಜ್ಯೋತಿಷಿಗಳಾದ ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.
ಕಷ್ಟ ಹಾಗೂ ಸಂಕಟಗಳಿಂದ ಪಾರಾಗಲು ಆಚರಿಸುವ ಪೂಜಾ ವಿಧಿವಿಧಾನವೇ ಸಂಕಷ್ಟಹರ ಚತುರ್ಥಿ. ಇದರ ಆಚರಣೆ ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ‘ಅಂಗಾರಕ ಚತುರ್ಥಿ’ ಎಂದು ಕರೆಯಲಾಗುತ್ತದೆ.
ಮಹತ್ವ:
ಶಿವ ತನ್ನ ಪುತ್ರನಾದ ಗಣೇಶನನ್ನು ಮೊದಲು ಪೂಜಿಸುವಂತೆ ಘೋಷಣೆ ಮಾಡಿದನು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಕಷ್ಟ ಚತುರ್ಥಿಯಂದು ಗಣೇಶ ಧರೆಗೆ ಬಂದು ಭಕ್ತರ ಸಂಕಷ್ಟಗಳನ್ನು ಆಲಿಸಿದ ಎಂಬ ನಂಬಿಕೆ ಇದೆ.
ಈ ಸಂಕಷ್ಟ ಚತುರ್ಥಿಯಂದು ಗಣೇಶನಿಗೆ ಉಪವಾಸ ವೃತ್ರವನ್ನು ಕೈಗೊಂಡು ಪೂಜೆ ಸಲ್ಲಿಸುವುದರಿಂದ ಕಷ್ಟಗಳು ಬಗೆಹರಿಯುತ್ತವೆ.
ನಳ ಮಹಾರಾಜ ಸಂಕಷ್ಟಹರ ಚತುರ್ಥಿಯನ್ನು ಶ್ರದ್ಧೆಯಿಂದ ಆಚರಿಸಿದರ ಪರಿಣಾಮ ಶನಿ ದೋಷ ಪರಿಹಾರವಾಯಿತು ಎಂದು ಹೇಳಲಾಗುತ್ತದೆ.
ಶ್ರೀ ಕೃಷ್ಣನು ಇದೇ ಚತುರ್ಥಿಯಂದು ಶಮಂತಕ ಮಣಿಯನ್ನು ಪಡೆದು ಜಾಂಬುವಂತಿಯನ್ನು ವಿವಾಹವಾದನು ಎಂದು ನಂಬಲಾಗಿದೆ.
ಗಣೇಶನಿಗೆ ಮೋದಕ, ಗರಿಕೆ, ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಿ, ಗಣೇಶನ ಅಷ್ಟೋತ್ತರ ಮಂತ್ರ ಜಪಿಸಿ ಪೂಜೆ ಸಲ್ಲಿಸುವುದು ಶುಭಕರವಾಗಿದೆ.
ಸಂಜೆ ಚಂದ್ರ ದರ್ಶನವನ್ನು ಮಾಡುವುದರಿಂದ ಒಳಿತಾಗುತ್ತದೆ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.
ಈ ಪೂಜೆಯಿಂದ ಧನ, ಧಾನ್ಯ, ವಿದ್ಯೆ, ಆರೋಗ್ಯ, ಸಂತಾನಭಾಗ್ಯ, ಮುಂತಾದ ಫಲ ದೊರೆಯುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.