
ಚಿತ್ರ: ಪ್ರಜಾವಾಣಿ
ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ. ಆದರೆ ಮನೆಯಲ್ಲಿರುವ ತುಳಸಿ ಕೆಲವೊಮ್ಮೆ ಒಣಗಿ ಹೋಗುತ್ತದೆ. ತುಳಸಿ ಒಣಗುವುದು ಎಚ್ಚರಿಕೆಯ ಸಂದೇಶ ಎಂದು ಹೇಳಲಾಗುತ್ತದೆ. ಹಾಗಾದರೆ ತುಳಸಿ ಗಿಡ ಒಣಗಳು ಕಾರಣವೇನು ಎಂಬುದನ್ನು ನೋಡೋಣ.
ತುಳಸಿ ಗಿಡವನ್ನು ಕುಂಡದಲ್ಲಿ ಹಾಕಿ ಬೆಳೆಸುವುದು ಸೂಕ್ತವಲ್ಲ. ಕುಂಡದಲ್ಲಿ ತುಳಸಿ ಗಿಡ ಬೇರು ಬಿಡುವುದಕ್ಕೆ ಹೆಚ್ಚು ಸ್ಥಳಾವಕಾಶ ಇರುವುದಿಲ್ಲ. ಆದ್ದರಿಂದ ನೆಲದಲ್ಲಿಯೇ ಬೆಳೆಸುವುದು ಉತ್ತಮ. ಅಥವಾ ದೊಡ್ಡ ಕುಂಡದಲ್ಲಿ ಬೆಳೆಸಬಹುದು.
ತುಳಸಿಯ ಎಲೆಯನ್ನು ಉಗುರಿನಿಂದ ಕೀಳಬಾರದು. ಒಂದು ವೇಳೆ ಎಲೆಗಳನ್ನು ಕಿತ್ತರೆ ತುಳಸಿ ಒಣಗುವ ಸಾಧ್ಯತೆ ಇರುತ್ತದೆ.
ಅಶುದ್ದವಾದ ನೀರನ್ನು ತುಳಸಿ ಗಿಡಕ್ಕೆ ಹಾಕಬಾರದು. ಆಗಾಗ ಹಳೆಯ ಮಣ್ಣನ್ನು ತೆಗೆದು, ಹೊಸ ಮಣ್ಣನ್ನು ಹಾಕುವುದು ಅಥವಾ ಮೃತ್ತಿಕೆ ತಂದು ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ.
ನಿಮ್ಮ ಮನೆಯ ಮೇಲೆ ದುಷ್ಟಗ್ರಹದ ಪ್ರಭಾವ ಬಿದ್ದಾಗ, ಮಾಟಮಂತ್ರಗಳ ಪ್ರಯೋಗವಾದಾಗ ಅದನ್ನು ತುಳಸಿ ತಡೆಯುತ್ತದೆ ಎಂಬ ನಂಬಿಕೆ ಇದೆ. ಇಂತಹ ಸನ್ನಿವೇಶದಲ್ಲಿ ತುಳಸಿ ಒಣಗುವುದುಂಟು. ಇದು ಎಚ್ಚರಿಕೆಯ ಸಂದೇಶವೆಂದೆ ಭಾವಿಸಬೇಕು.
ಪ್ರತಿದಿನ ತುಳಸಿಗೆ ನೀರು ಹಾಕುವುದರಿಂದ ಮಾಟ ಮಂತ್ರ ಹಾಗೂ ತಾಂತ್ರಿಕ ದೋಷಗಳು ತಟ್ಟುವುದಿಲ್ಲ.
ತುಳಸಿಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಇಟ್ಟು ಪೂಜೆಸಲ್ಲಿಸುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.