
ಚಿತ್ರ: ಗೆಟ್ಟಿ
ಕೆಲವು ದಿಕ್ಕಿಗೆ ತಲೆಹಾಕಿ ಮಲಗುವುದು ವಾಸ್ತು ಪ್ರಕಾರ ಸಮಂಜಸವಲ್ಲ. ಯಾವ ದಿಕ್ಕಿಗೆ ತಲೆ ಹಾಕಿ ಮಲಗುವುದು ಶುಭ ಹಾಗೂ ಪುರಾಣ ಕಥೆಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ.
ವಾಸ್ತುಶಾಸ್ತ್ರದ ಪ್ರಕಾರ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮದ ಪ್ರಕಾರ ಈ ದಿಕ್ಕಿನಲ್ಲಿ ಯಮದೂತರು ಸಂಚರಿಸುತ್ತಾರೆ ಎಂಬ ನಂಬಿಕೆ ಇದೆ. ಭೂಮಿಯ ಕಾಂತಕ್ಷೇತ್ರದ ಪರಿಣಾಮ ರಕ್ತಸಂಚಾರದಲ್ಲಿ ಏರಿಳಿತ ಉಂಟಾಗುತ್ತದೆ. ಮಿದುಳಿಗೆ ರಕ್ತದ ಹರಿವು ಹೆಚ್ಚಾಗಿ ಹೃದಯ ಸಮಸ್ಯೆ ಮತ್ತು ನಿದ್ರಾ ಭಂಗ ಉಂಟಾಗಬಹುದು ಎಂದು ಶಾಸ್ತ್ರ ಹಾಗೂ ವಿಜ್ಞಾನ ಹೇಳುತ್ತದೆ.
ಪೌರಾಣಿಕ ಕಥೆಗಳ ಪ್ರಕಾರ ಶಿವನು ಗಣೇಶನ ಶಿರವನ್ನು ಕತ್ತರಿಸುತ್ತಾನೆ. ಆಗ ಶಿವ ಗಣೇಶನಿಗೆ ಮರುಜೀವ ನೀಡಲು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ಶಿರವನ್ನು ತರಿಸಿ ಗಣೇಶನಿಗೆ ಮರು ಜೀವ ನೀಡಲಾಯಿತು. ಈ ಕಾರಣದಿಂದ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದು ಮರಣದ ಸಂಕೇತ ಎಂದು ನಂಬಲಾಗಿದೆ. ದೇಹದಿಂದ ಆತ್ಮ ಹೊರ ಹೋಗುವ ದಿಕ್ಕು ಎಂದು ಉತ್ತರ ದಿಕ್ಕನ್ನು ಕರೆಯಲಾಗುತ್ತದೆ.
ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ಉತ್ತರ ದಿಕ್ಕು ಕುಬೇರನಿಗೆ ಮತ್ತು ದಕ್ಷಿಣ ದಿಕ್ಕು ಯಮನಿಗೆ ಸಂಬಂಧಿಸಿದೆ. ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಆಯಸ್ಸು ಹೆಚ್ಚುತ್ತದೆ. ಧನಾತ್ಮಕ ಶಕ್ತಿ ಲಭಿಸುತ್ತದೆ. ಆದರೆ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ, ಆರೋಗ್ಯ ಸಮಸ್ಯೆ, ಖಿನ್ನತೆ ಮತ್ತು ಶಾಂತಿಯುತ ನಿದ್ರೆಗೆ ಭಂಗ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದು ಸೂಕ್ತ. ಈ ದಿಕ್ಕಿನಲ್ಲಿ ಮಲಗುವುದರಿಂದ ನೆಮ್ಮದಿಯ ನಿದ್ದೆ, ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ತಪ್ಪಾದ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ನಿದ್ದೆಯ ದಿಕ್ಕು ನಮ್ಮ ಜೀವನದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.
ಈ ನಿಯಮಗಳನ್ನು ಪಾಲಿಸುವ ಮೂಲಕ ಮಾನಸಿಕ ಶಾಂತಿಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.