ADVERTISEMENT

ಬಿಎಂಡಬ್ಲ್ಯು, ರೆನೊ ವಾಹನ ಬೆಲೆ ಹೆಚ್ಚಳ

ಪಿಟಿಐ
Published 20 ಮಾರ್ಚ್ 2025, 13:03 IST
Last Updated 20 ಮಾರ್ಚ್ 2025, 13:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಾಹನ ತಯಾರಿಕಾ ಕಂಪನಿ ಬಿಎಂಡಬ್ಯ್ಲು ಇಂಡಿಯಾ ಮತ್ತು ರೆನೊ ಇಂಡಿಯಾ ವಾಹನಗಳ ದರ ಹೆಚ್ಚಳಕ್ಕೆ ನಿರ್ಧರಿಸಿವೆ. ಏಪ್ರಿಲ್‌ನಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದೆ. 

ಬಿಎಂಡಬ್ಯ್ಲು ಕಾರುಗಳ ಬೆಲೆಯು ಶೇ 3ರ ವರೆಗೆ ಹೆಚ್ಚಳವಾಗಲಿದೆ. ರೆನೊ ಇಂಡಿಯಾ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಶೇ 2ರ ವರೆಗೆ ಏರಿಕೆ ಮಾಡಲಿದೆ.  

ತಯಾರಿಕಾ ಮತ್ತು ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ದರ ಏರಿಕೆಯು ಅನಿವಾರ್ಯವಾಗಿದೆ ಎಂದು ಕಂಪನಿಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.