ADVERTISEMENT

ಸ್ವಿಫ್ಟ್‌, ಸಿಎನ್‌ಜಿ ಆವೃತ್ತಿಗಳ ಬೆಲೆ ಹೆಚ್ಚಿಸಿದ ಮಾರುತಿ

ಪಿಟಿಐ
Published 12 ಜುಲೈ 2021, 11:40 IST
Last Updated 12 ಜುಲೈ 2021, 11:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೋಮವಾರದಿಂದ ಜಾರಿಗೆ ಬರುವಂತೆ ಸ್ವಿಫ್ಟ್‌ ಮತ್ತು ಇತರ ಮಾದರಿಗಳ ಸಿಎನ್‌ಜಿ ಆವೃತ್ತಿಗಳ ಬೆಲೆಯನ್ನು ₹ 15 ಸಾವಿರದವರೆಗೂ ಏರಿಕೆ ಮಾಡಿದೆ.

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆ ಮಾಡುತ್ತಿರುವುದಾಗಿ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಆಲ್ಟೊ, ಸೆಲೆರಿಯೊ, ಎಸ್‌–ಪ್ರೆಸೊ, ವ್ಯಾಗನ್‌ಆರ್‌, ಇಕೊ ಮತ್ತು ಎರ್ಟಿಗಾ ಮಾದರಿಗಳಸಿಎನ್‌ಜಿ ಆವೃತ್ತಿಯನ್ನು ಕಂಪನಿ ಮಾರಾಟ ಮಾಡುತ್ತಿದೆ.

ಕಂಪನಿಯು ಏಪ್ರಿಲ್‌ನಲ್ಲಿ ಸೆಲೆರಿಯೊ ಮತ್ತು ಸ್ವಿಫ್ಟ್‌ ಹೊರತುಪಡಿಸಿ ಉಳಿದೆಲ್ಲಾ ಮಾದರಿಗಳ ಬೆಲೆಯನ್ನು ₹ 22,500ರವರೆಗೂ ಏರಿಕೆ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.