ADVERTISEMENT

ಎಂಜಿ ಮೋಟರ್‌ ಕಾರು ಬೆಲೆ ಹೆಚ್ಚಳ

ಪಿಟಿಐ
Published 18 ಡಿಸೆಂಬರ್ 2020, 11:12 IST
Last Updated 18 ಡಿಸೆಂಬರ್ 2020, 11:12 IST
ಎಂಜಿ ಮೋಟರ್ ಇಂಡಿಯಾ
ಎಂಜಿ ಮೋಟರ್ ಇಂಡಿಯಾ    

ನವದೆಹಲಿ: ಎಂಜಿ ಮೋಟರ್ ಇಂಡಿಯಾ ಕಂಪನಿಯು ತನ್ನ ವಾಹನಗಳ ಬೆಲೆಯನ್ನು ಜನವರಿಯಿಂದ ಗರಿಷ್ಠ ಶೇಕಡ 3ರವರೆಗೆ ಹೆಚ್ಚಿಸಲಿದೆ. ತಯಾರಿಕಾ ವೆಚ್ಚದಲ್ಲಿ ಹೆಚ್ಚಳ ಆಗಿರುವ ಕಾರಣ ಬೆಲೆಯಲ್ಲೂ ಹೆಚ್ಚಳ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಹೆಕ್ಟರ್ ಪ್ಲಸ್‌ ಮಾದರಿಯಲ್ಲಿ ಏಳು ಆಸನಗಳ ಕಾರನ್ನು ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದೂ ಅದು ತಿಳಿಸಿದೆ.

‘ಹಲವು ವೆಚ್ಚಗಳಲ್ಲಿ ಹೆಚ್ಚಳ ಆಗಿರುವ ಕಾರಣ ನಾವು ನಮ್ಮೆಲ್ಲ ವಾಹನಗಳ ಬೆಲೆಯಲ್ಲಿ ಗರಿಷ್ಠ ಶೇಕಡ 3ರಷ್ಟು ಹೆಚ್ಚಳ ಮಾಡಲಿದ್ದೇವೆ. ಜನವರಿ 1ರಿಂದ ಈ ಹೆಚ್ಚಳ ಜಾರಿಗೆ ಬರಲಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಹೆಕ್ಟರ್, ಜೆಡ್‌ಎಸ್‌ ಇವಿ ಮತ್ತು ಗ್ಲೋಸ್ಟರ್ ಮಾದರಿಯ ಕಾರುಗಳನ್ನು ಎಂಜಿ ಮೋಟರ್ ಕಂಪನಿಯು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇವುಗಳ ಬೆಲೆಯು ₹ 12.83 ಲಕ್ಷದಿಂದ ₹ 35.6 ಲಕ್ಷದ ನಡುವೆ ಇದೆ. ಮಾರುತಿ ಸುಜುಕಿ, ಫೋರ್ಡ್‌ ಇಂಡಿಯಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಹೀರೊ ಮೋಟೊಕಾರ್ಪ್‌ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಈಗಾಗಲೇ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.