
ಸ್ಮಾರ್ಟ್ ಕಾರ್ಡ್ ಮಾದರಿ
ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಹೊಸ ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದು, ವಾಹನದ ಮತ್ತು ಚಾಲನಾ ಪರವಾನಗಿ ಹೊಂದಿದ್ದವರ ಪೂರ್ಣ ಮಾಹಿತಿ ಇದರಲ್ಲಿ ಒಳಗೊಂಡಿದೆ.
ವಿಶಿಷ್ಟತೆಗಳೇನು?
*ಸಾರಿಗೆ ಇಲಾಖೆಯಲ್ಲಿ ನೋಂದಣಿ ಪ್ರಮಾಣಪತ್ರ (RC) ಮತ್ತು ಚಾಲನಾ ಪರವಾನಗಿ (DL)ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು 2025ರ ಡಿಸೆಂಬರ್ 1ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಜಾರಿಗೆ ಬರುವಂತೆ ಪ್ರಾರಂಭಿಸಲಾಗಿದೆ.
*ಕೇಂದ್ರ ಸರ್ಕಾರದ ಅಧಿಸೂಚನೆ ಸಂಖ್ಯೆ.GSR 174(E),ದಿನಾಂಕ:01-03-2019 ಅನುಸಾರ ದೇಶಾದ್ಯಂತ ಒಂದೇ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಿ ವಾಹನ ಮಾಲೀಕರಿಗೆ ಮತ್ತು ಲೈಸೆನ್ಸ್ ದಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
*ಸ್ಮಾರ್ಟ್ ಕಾರ್ಡ್ ಪಾಲಿಕಾರ್ಬೊನೇಟ್ ಪರಿಕರ ಆಗಿದ್ದು, ಲೇಸರ್ ಮೂಲಕ ಮುದ್ರಿಸಲಾಗುತ್ತಿದ್ದು, ಸ್ಮಾರ್ಟ್ ಕಾರ್ಡಿನಲ್ಲಿ 64 KB ಸಾಮರ್ಥ್ಯದ ಮೈಕ್ರೋ ಚಿಪ್ ಅನ್ನು ಹೊಂದಿದ್ದು, ಹೆಚ್ಚುವರಿಯಾಗಿ ಎನ್‌ಐಸಿ ತಂತ್ರಾಂಶದ QR Code ಅನ್ನು ಸಹ ಮುದ್ರಿಸಲಾಗುತ್ತದೆ.
*ಸ್ಮಾರ್ಟ್ ಕಾರ್ಡ್‌ಗಳನ್ನು ಸಾರಿಗೆ ಆಯುಕ್ತರ ಕಚೇರಿಯಲ್ಲಿ ಸ್ಥಾಪಿತವಾಗಿರುವ ಕೇಂದ್ರಿಕೃತ ಮುದ್ರಣ ಸೌಲಭ್ಯ (Centralised Printing Facility) ವ್ಯವಸ್ಥೆಯಡಿ ಸೇವಾದಾರರಾದ M/s Rosmerta Technologies Ltd., New Delhi ರವರ ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಣ ಮಾಡಿ, ಸಂಬಂಧಪಟ್ಟ ರಾಜ್ಯದ ಅಧೀನ ಕಚೇರಿಗಳಿಗೆ ರವಾನಿಸಲಾಗುವುದು ಮತ್ತು ಸಂಬಂಧಿಸಿದ RTO / ARTO ರವರು ಸ್ಮಾರ್ಟ್ ಕಾರ್ಡಿನಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಪರಿಶೀಲಿಸಿ KMS ಮಾಡಿದ ನಂತರ ಸ್ಪೀಡ್ ಪೋಸ್ಟ್ ಮೂಲಕ ಸಂಬಂಧಪಟ್ಟವರಿಗೆ ರವಾನಿಸಲಾಗುವುದು.
*ಕೇಂದ್ರಿಕೃತ ಮುದ್ರಣ ಸೌಲಭ್ಯದಲ್ಲಿರುವ ಎರಡು ಸ್ಮಾರ್ಟ್ ಕಾರ್ಡ್ ಪ್ರಿಂಟಿಂಗ್ ಮೆಷಿನ್ S-7000 (ಮಾಡೆಲ್) ಅನ್ನು ಸೇವಾದಾರರ ಮೂಲಕ ಇಟಲಿ ದೇಶದ ಮ್ಯಾಟಿಕಾ ಫಿನ್‌ಟೆಕ್ ಎಸ್‌ಪಿಎ ಕಂಪೆನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಆಮದು ಮಾಡಿಕೊಂಡಿರುವ ಪ್ರಿಂಟಿಂಗ್ ಮೆಷಿನ್‌ನಲ್ಲಿರುವ ವೈಶಿಷ್ಟ್ಯತೆಗಳು ದೇಶದಲ್ಲಿಯೇ ಮೊದಲನೆಯದಾಗಿದ್ದು, ಒಂದು ತಾಸಿಗೆ ಸುಮಾರು 500-600 ಸ್ಮಾರ್ಟ್ ಕಾರ್ಡ್‌ಗಳನ್ನು ಮುದ್ರಿಸಲಾಗುತ್ತಿದ್ದು, ಒಂದು ದಿನದಲ್ಲಿ ಅಂದಾಜು 15 ರಿಂದ 16 ಸಾವಿರ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಲಾಗುತ್ತದೆ.
*ಅರ್ಜಿದಾರರಿಂದ ಪ್ರತಿ ಸ್ಮಾರ್ಟ್ ಕಾರ್ಡಿಗೆ ಸಂಗ್ರಹಿಸಲಾಗುವ ಒಟ್ಟಾರೆ ಶುಲ್ಕ ₹200ರ ಪೈಕಿ ಸೇವಾದಾರರ ಪಾಲು ₹64.46ಗಳು (ಎಲ್ಲಾ ತರಹದ ತೆರಿಗೆಗಳು ಸೇರಿ) ಮತ್ತು ಸರ್ಕಾರದ ಪಾಲು ₹135.54ಗಳಾಗಿರುತ್ತವೆ.
*ಮೈಕ್ರೊ ಚಿಪ್ ಹೊಂದಿರುವ ನೋಂದಣಿ ಪ್ರಮಾಣಪತ್ರ (RC) ಸ್ಮಾರ್ಟ್ ಕಾರ್ಡಿನ ಎರಡು ಬದಿಯಲ್ಲಿ ಮಾಹಿತಿಗಳಾದ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ನೋಂದಣಿ ಸಿಂಧುತ್ವ ಅವಧಿ, ಮಾಲೀಕತ್ವ ಕ್ರಮ ಸಂಖ್ಯೆ, ಚಾಸೀ ಸಂಖ್ಯೆ, ಎಂಜಿನ್ ಸಂಖ್ಯೆ, ಮಾಲೀಕರ ಹೆಸರು, ಮಾಲೀಕರ ವಿಳಾಸ, ಇಂಧನ, ಹೊರಸೂಸುವಿಕೆ ಮಾನದಂಡಗಳು, ವಾಹನ ತಯಾರಾದ ತಿಂಗಳು-ವರ್ಷ, ಸಿಲಿಂಡರ್‌ಗಳ ಸಂಖ್ಯೆ, ಆಕ್ಸಲ್ ಸಂಖ್ಯೆ, ವಾಹನ ತಯಾರಿಕಾ ಸಂಸ್ಥೆಯ ಹೆಸರು, ವಾಹನ ಮಾಡೆಲ್, ಬಣ್ಣ, ವಾಹನದ ಬಾಡಿ ವಿಧ, ಕುಳಿತುಕೊಳ್ಳುವ ಸಾಮರ್ಥ್ಯ, ನಿಲ್ಲುವ ಸಾಮರ್ಥ್ಯ, ಸ್ಲೀಪರ್ ಸಾಮರ್ಥ್ಯ, ಅನ್‌ಲ್ಯಾಡೆನ್ ತೂಕ, ಲ್ಯಾಡೆನ್ ತೂಕ, ಒಟ್ಟು ಸಂಯೋಜನೆಯ ತೂಕ, ಘನ ಸಾಮರ್ಥ್ಯ, ಹಾರ್ಸ್ ಪವರ್, ವೀಲ್ ಬೇಸ್, ಹಣಕಾಸು ಒದಗಿಸಿದವರ ಹೆಸರು ಮುದ್ರಿತವಾಗುತ್ತದೆ.
*ಚಾಲನಾ ಪರವಾನಗಿ (DL) ಸ್ಮಾರ್ಟ್ ಕಾರ್ಡುಗಳನ್ನು ಈ ತಿಂಗಳ 15ನೇ ತಾರೀಖಿನೊಳಗಾಗಿ ಕೇಂದ್ರಿಕೃತ ಮುದ್ರಣ ಸೌಲಭ್ಯದಡಿ NICರವರೊಂದಿಗೆ ಸಾಫ್ಟ್ ವೇರ್ ಇಂಟಿಗ್ರೇಷನ್ ಮಾಡಿ ಮುದ್ರಿಸಿ ಲೈಸೆನ್ಸ್ ದಾರರಿಗೆ ವಿತರಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.