ADVERTISEMENT

ಜಪಾನ್‌ನಲ್ಲಿ ಸ್ವಿಫ್ಟ್‌ ತಯಾರಿಕೆ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:49 IST
Last Updated 5 ಜೂನ್ 2025, 15:49 IST
<div class="paragraphs"><p>ಮಾರುತಿ ಸ್ವಿಫ್ಟ್</p></div>

ಮಾರುತಿ ಸ್ವಿಫ್ಟ್

   

(ಪಿಟಿಐ ಚಿತ್ರ)

ಟೋಕಿಯೊ: ಚೀನಾ ದೇಶವು ಕೆಲವು ಲೋಹಗಳ ಆಕ್ಸೈಡುಗಳ (ರೇರ್ ಅರ್ಥ್ಸ್‌) ಪೂರೈಕೆ ಮೇಲೆ ನಿರ್ಬಂಧ ಹೇರಿರುವುದರ ಕಾರಣಕ್ಕೆ ಸುಜುಕಿ ಮೋಟರ್ ಕಂಪನಿಯು ‘ಸ್ವಿಫ್ಟ್‌’ ಕಾರುಗಳ ತಯಾರಿಕೆಯನ್ನು ಅಮಾನತಿನಲ್ಲಿ ಇರಿಸಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಸುಜುಕಿ ಕಂಪನಿಯು ‘ಸ್ವಿಫ್ಟ್‌ ಸ್ಪೋರ್ಟ್’ ಆವೃತ್ತಿಯನ್ನು ಹೊರತುಪ‍ಡಿಸಿ ಬೇರೆಲ್ಲ ಆವೃತ್ತಿಗಳ ತಯಾರಿಕೆಯನ್ನು ಮೇ 26ರಿಂದ ಅಮಾನತಿನಲ್ಲಿ ಇರಿಸಿದೆ.

ಜೂನ್‌ 13ರಿಂದ ತಯಾರಿಕೆಯನ್ನು ಭಾಗಶಃ ಪುನರಾರಂಭಿಸುವ ಹಾಗೂ ಜೂನ್‌ 16ರಿಂದ ಪೂರ್ತಿಯಾಗಿ ಪುನರಾರಂಭಿಸುವ ಆಲೋಚನೆಯನ್ನು ಸುಜುಕಿ ಕಂಪನಿ ಈಗ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.