ADVERTISEMENT

9.75 ಲಕ್ಷ ಟ್ರ್ಯಾಕ್ಟರ್ ಮಾರಾಟ ನಿರೀಕ್ಷೆ: ಕ್ರಿಸಿಲ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 13:38 IST
Last Updated 21 ಏಪ್ರಿಲ್ 2025, 13:38 IST
ಟ್ರ್ಯಾಕ್ಟರ್
ಟ್ರ್ಯಾಕ್ಟರ್   

ನವದೆಹಲಿ: 2025–26ರ ಆರ್ಥಿಕ ವರ್ಷದಲ್ಲಿ 9.75 ಲಕ್ಷ ಟ್ರ್ಯಾಕ್ಟರ್‌ಗಳು ದೇಶದಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಇದರ ಅಂದಾಜು ಮೌಲ್ಯವು ₹4 ಸಾವಿರ ಕೋಟಿ ಆಗಬಹುದು ಎಂದು ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಪ್ರಮುಖ ವಾಣಿಜ್ಯ ಬೆಳೆಗಳಿಗೆ ಹೆಚ್ಚಿದ ಕನಿಷ್ಠ ಬೆಂಬಲ ಬೆಲೆ, ನಿರ್ಮಾಣ ಚಟುವಟಿಕೆ ಹೆಚ್ಚಳ ಮತ್ತು ಸಾಮ್ಯಾನಕ್ಕಿಂತ ಅಧಿಕ ಮಳೆಯು ದೇಶೀಯ ಮಾರುಕಟ್ಟೆಯಲ್ಲಿ ಟ್ರ್ಯಾಕ್ಟರ್‌ಗೆ ಬೇಡಿಕೆಯನ್ನು ಶೇ 5ರಷ್ಟು ಹೆಚ್ಚಿಸಹುದು ಎಂದು ಸೋಮವಾರ ಹೇಳಿದೆ.

ಕಳೆದ ಆರ್ಥಿಕ ವರ್ಷದ ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಶೇ 7ರಷ್ಟು ಏರಿಕೆ ಕಂಡಿತ್ತು ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.