ADVERTISEMENT

ಚರ್ಮ, ಕೂದಲು ಸದೃಢವಾಗಲು 7 ದಿನಗಳ ಆಹಾರ ಯೋಜನೆ ಹೀಗಿರಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 10:11 IST
Last Updated 7 ಫೆಬ್ರುವರಿ 2026, 10:11 IST
<div class="paragraphs"><p>ಗೆಟ್ಟಿಚಿತ್ರ</p></div>

ಗೆಟ್ಟಿಚಿತ್ರ

   

ಸುಂದರ ಚರ್ಮ ಮತ್ತು ಸದೃಢ ಕೂದಲು ಕೇವಲ ಕ್ರೀಮ್‌ಗಳಿಂದ ಅಲ್ಲ ದೇಹದ ಒಳಗಿನ ಪೋಷಣೆಯಿಂದ ಬರುತ್ತವೆ. ಆಯುರ್ವೇದದಲ್ಲಿ ‘ಒಳಗಿನ ಸಮತೋಲನವೇ ಹೊರಗಿನ ಸೌಂದರ್ಯ’ ಎಂಬ ಮಾತಿದೆ. ಆದ್ದರಿಂದ ಪ್ರತಿದಿನದ ಆಹಾರವೇ ನಮಗೆ ಮುಖ್ಯ ಚಿಕಿತ್ಸೆ.

ಗೆಟ್ಟಿಚಿತ್ರ

ADVERTISEMENT

ಮುಖ್ಯ ಆಹಾರ ನಿಯಮಗಳು

ರಕ್ತ ಶುದ್ಧೀಕರಣಕ್ಕೆ: ಬೀಟ್‌ರೂಟ್, ಕ್ಯಾರೆಟ್, ದಾಳಿಂಬೆ, ಪಾಲಕ್ ಇವುಗಳು ಮುಖದ ಕಾಂತಿ ಹೆಚ್ಚಿಸಿ ಮೊಡವೆ ಕಡಿಮೆ ಮಾಡುತ್ತವೆ.

ಕೂದಲಿನ ಬಲಕ್ಕೆ: ಕಪ್ಪು ಎಳ್ಳು, ಕಡಲೆಕಾಯಿ, ಬಾದಾಮಿ, ಅಕ್ರೋಟ್, ಹಾಲು, ತುಪ್ಪ, ಮೊಟ್ಟೆ ತಿನ್ನುವವರಿಗೆ ಸದೃಢ ಕೂದಲು ಬರುತ್ತವೆ.

ಇವುಗಳನ್ನು ತಪ್ಪಿಸಿ: ಜಂಕ್ ಫುಡ್, ಹೆಚ್ಚು ಖಾರ, ಎಣ್ಣೆ, ಅತಿ ಉಪ್ಪು, ತಡರಾತ್ರಿ ಊಟ ಇವುಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ.

ವಾರದ ಪೌಷ್ಟಿಕ ಯೋಜನೆ ಹೀಗಿರಲಿ

ಸೋಮವಾರ: ಹಸಿರು ಸೊಪ್ಪು, 15 ಬಾದಾಮಿ ಮತ್ತು 2 ಮೊಟ್ಟೆ ಸೇವಿಸಿ.

ಮಂಗಳವಾರ: ನೆಲ್ಲಿಕಾಯಿ ಜ್ಯೂಸ್, 100 ಗ್ರಾಮ್ ಪನೀರ್, ಚಪಾತಿ, ತರಕಾರಿ ಪಲ್ಯ ಇವುಗಳು ಯೌವನ, ರೋಗನಿರೋಧಕ ಶಕ್ತಿಯನ್ನು ಹೆಚ್ಚುಸುತ್ತವೆ.

ಬುಧವಾರ: ಹೆಸರು ಕಾಳು ಸೂಪ್, ಪಲಾವ್, 1 ಗ್ಲಾಸ್ ಮಜ್ಜಿಗೆ, ಬಾದಾಮಿ, 2 ಅಕ್ರೋಟ್ (ಒಮೆಗಾ-3 → ಹೊಳಪು ಚರ್ಮ) ತಿನ್ನಿ.

ಗುರುವಾರ: ಅಕ್ಕಿ ಪಾಯಸ, 10 ಎಂಎಲ್ ತುಪ್ಪ, ತರಕಾರಿ ಪಲ್ಯ, ಚಪಾತಿ ಸೇವಿಸಿ.

ಶುಕ್ರವಾರ: 2 ಮೊಟ್ಟೆ, ಅನ್ನ, ತರಕಾರಿ ಸಾಂಬಾರ್, ಕ್ಯಾರೆಟ್-ಬೀಟ್‌ರೂಟ್ ರಸ ಇದು ರಕ್ತ ಶುದ್ಧೀಕರಣಕ್ಕೆ ಸಹಾಯಕಾರಿಯಾಗುತ್ತದೆ.

ಶನಿವಾರ: ಅಕ್ಕಿ ರೊಟ್ಟಿ, ಬೆಂಡೆಕಾಯಿ ಪಲ್ಯ, 2 ಮೊಟ್ಟೆ ಜೊತೆಗೆ ಪ್ರತಿಯೊಂದು ಊಟದಲ್ಲಿ 1 ಚಮಚ ತುಪ್ಪ ಸೇವಿಸಿ.

ಭಾನುವಾರ: ಹೆಸರುಬೇಳೆ ಕಿಚಡಿ/ತರಕಾರಿ ಸೂಪ್, ರಾತ್ರಿ ಮಲಗುವ ಮುನ್ನ ತ್ರಿಫಲ ಕಷಾಯ ಸೇವಿಸಿ. ಈ ತ್ರಿಫಲ ಹರಿತಕಿ (ಅಳಲೆಕಾಯಿ), ವಿಭೀತಕಿ (ತಾರೆಕಾಯಿ), ಮತ್ತು ಅಮಲಕಿ (ನೆಲ್ಲಿಕಾಯಿ) ಎಂಬ ಮೂರು ಒಣಗಿದ ಹಣ್ಣುಗಳ ಮಿಶ್ರಣವಾಗಿದೆ.

ಗೆಟ್ಟಿಚಿತ್ರ

ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯ ಹೆಚ್ಚಿಸಲು ಇಲ್ಲಿವೆ ಕೆಲವು ಸೂತ್ರಗಳು

ಬಿಸಿ ನೀರು: ಸೂರ್ಯೋದಯಕ್ಕೂ ಮುನ್ನ ಎದ್ದು 1 ಗ್ಲಾಸ್ ಬಿಸಿ ನೀರು ಕುಡಿದರೆ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ.

ವ್ಯಾಯಾಮ: ಪ್ರತಿ ದಿನ ವ್ಯಾಯಾಮ ಮಾಡಿದರೆ, ದೇಹ ಸದೃಢವಾಗುತ್ತದೆ. ಇದರಿಂದ ಚರ್ಮದ ಕಾಂತಿಯೂ ಹೆಚ್ಚುತ್ತದೆ.

ನಿದ್ರೆ: ರಾತ್ರಿ 10 ಗಂಟೆಗೆ ಮಲಗಿ. 6 ರಿಂದ 7 ಗಂಟೆಗಳ ಕಾಲ ನಿದ್ದೆ ಮಾಡಿ ಇದರಿಂದ ಚರ್ಮ, ವೇಗವಾಗಿ ಕೂದಲು ಬೆಳೆಯುತ್ತದೆ.

ತುಪ್ಪ: ಹಾಲಿನ ಜೊತೆ ತುಪ್ಪ ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮಕ್ಕೆ ಬೇಕಾದ ಬಹುತೇಕ ವಿಟಮಿನ್ಸ್ ಮತ್ತು ಖನಿಜಗಳನ್ನು ಪೂರೈಸಬಹುದು.

ಅಭ್ಯಂಗ: ಪ್ರತಿದಿನ ತಲೆಗೆ ಮತ್ತು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದೇಹದ ಕಾಂತಿ ಕ್ರಮೇಣವಾಗಿ ಹೆಚ್ಚುತ್ತಾ ಬರುತ್ತದೆ.

ಮನಸ್ಸು: ದೇಹದ ಜೊತೆ ಮನಸ್ಸು ಉಲ್ಲಾಸಭರಿತವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಈ ಮೇಲಿನ ಸರಳ ಅಭ್ಯಾಸಗಳನ್ನು ಅನುಸರಿಸಿದರೆ ಯಾವುದೇ ಅಡ್ಡಪರಿಣಾಮವಿಲ್ಲದೆ ಆರೋಗ್ಯಕರ ಚರ್ಮ ಮತ್ತು ದಟ್ಟ ಕೂದಲು ಪಡೆಯಬಹುದು.

(ಲೇಖಕರು: ಡಾ.ಶಮೀಮ್ ಬಾನು ನಬೀಸಾಬ್, ಸಹಾಯಕ ಪ್ರಾಧ್ಯಾಪಕರು ಪಂಚಕರ್ಮ ವಿಭಾಗ, ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.