ಬೆಳವಣಿಗೆ ಮತ್ತು ಬದಲಾವಣೆ ಎಂಬ ಎರಡು ಪರಿಕಲ್ಪನೆಗಳು ಪರಸ್ಪರ ಪೂರಕವಾಗಿ ಹೆಣೆದುಕೊಂಡಂತಿದೆ. ಅಗತ್ಯಕ್ಕೆ ತಕ್ಕಂತೆ ಮತ್ತು ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಾ ಸಾಗಿದಂತೆ ಬೆಳವಣಿಗೆ ಸಾಧಿಸುವ ಅವಕಾಶಗಳನ್ನೂ ಪಡೆದುಕೊಳ್ಳುತ್ತೇವೆ. ಬದಲಾವಣೆಯನ್ನು ಬೆಳವಣಿಗೆಯ ಸಾಧನವೆನ್ನಬಹುದು. ಮನುಷ್ಯರಾದ ನಾವು ನಮ್ಮ ಈಗಿನ ಪರಿಸ್ಥಿತಿಯನ್ನು ಸರಿಯಾಗಿ ರೂಪಿಸಿಕೊಳ್ಳಲು ಮತ್ತು ಶ್ರೇಷ್ಠತೆಯತ್ತ ಸಾಗಲು ಅನುವುಮಾಡಿಕೊಡುವಂತ ಭವಿಷ್ಯವನ್ನು ನಿರ್ಮಿಸಲು ಆಗಿಹೋದದ್ದನ್ನು ಒಪ್ಪಿಕೊಂಡು ಮುನ್ನಡೆಯಬೇಕಿದೆ. ʼಪತಂಜಲಿʼ ಬ್ರ್ಯಾಂಡ್‌ನ ಹೆಸರು ಪ್ರಾಚೀನವಾದದ್ದಾಗಿರುವುದರಿಂದ, ಇದು (ಪತಂಜಲಿಯು) ನಮ್ಮ ಇತಿಹಾಸದ ಬೇರುಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಕಲ್ಯಾಣದ ವಿಚಾರದಲ್ಲಿ ತನ್ನ ಪುರಾತನ ಅಭ್ಯಾಸಗಳಿಗೆ ಬದ್ಧವಾಗಿದೆ. ಇಂತಹ, ಪತಂಜಲಿ ಆಯುರ್ವೇದ ಲಿಮಿಟೆಡ್ ಅನ್ನು ಸ್ವಾಮಿ ರಾಮದೇವ್ ಜೀ ಮಹಾರಾಜ್ ಮತ್ತು ಆಚಾರ್ಯ ಬಾಲಕೃಷ್ಣ ಜೀ ಅವರು 2006 ರಲ್ಲಿ ಸ್ಥಾಪಿಸಿದರು.
ಪತಂಜಲಿ ಸಂಶೋಧನಾ ಸಂಸ್ಥೆ: ಸಹಬಾಳ್ವೆಯ ಕೇಂದ್ರ
ಪತಂಜಲಿ ಸಂಶೋಧನಾ ಪ್ರತಿಷ್ಠಾನ (ಟ್ರಸ್ಟ್) ಆಡಳಿತ ವ್ಯಾಪ್ತಿಯಲ್ಲಿರುವ ಪತಂಜಲಿ ಸಂಶೋಧನಾ ಪ್ರತಿಷ್ಠಾನವು ಉತ್ತರಾಖಂಡದ ಹರಿದ್ವಾರದಲ್ಲಿ 2017ರಲ್ಲಿ ಸ್ಥಾಪನೆಯಾಯಿತು. ಇದು, ಹಿಂದಿನ ಮತ್ತು ಭವಿಷ್ಯದ ಅಭ್ಯಾಸಗಳ ಕಲ್ಪನೆಗಳನ್ನು ಅಳವಡಿಸಿಕೊಳ್ಳಲು ಒಂದು ನಿರ್ದಿಷ್ಟ ಕ್ಷೇತ್ರವನ್ನು ರೂಪಿಸುವ ಧ್ಯೇಯವನ್ನು, ಆಯುರ್ವೇದ ಮತ್ತು ವಿಜ್ಞಾನವನ್ನು ಸಂಯೋಜಿಸುವ ಹಂಬಲವನ್ನು ಹೊಂದಿದೆ. ಹಾಗೆಯೇ, ಪ್ರಾಚೀನ ಮತ್ತು ಆಧುನಿಕ ಪದ್ಧತಿಗಳನ್ನು ಸಂಯೋಜಿಸುವ ಆಂತರಿಕ ವಿಚಾರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸಲು ಬಯಸುತ್ತದೆ.
ಸಂಸ್ಥೆಯ ಆಧಾರ ಸ್ಥಂಭಗಳು
1) ಡಾ. ಅನುರಾಗ್ ವರ್ಷ್ನೇ: ಪತಂಜಲಿ ಸಂಶೋಧನಾ ಪ್ರತಿಷ್ಠಾನದ ಉಪಾಧ್ಯಕ್ಷರು ಮತ್ತು ಔಷಧ ಆವಿಷ್ಕಾರ ಅಭಿವೃದ್ಧಿ ವಿಭಾಗ ಮತ್ತು ಕ್ಲಿನಿಕಲ್ ಸಂಶೋಧನಾ ವಿಭಾಗದ ಮುಖ್ಯಸ್ಥರು
2) ಡಾ. ಅನುಪಮ್ ಶ್ರೀವಾಸ್ತವ: ಪತಂಜಲಿ ಸಂಶೋಧನಾ ಪ್ರತಿಷ್ಠಾನದ ಮುಖ್ಯ ಜ್ಞಾನ ಅಧಿಕಾರಿ
3) ಡಾ. ವೇದಪ್ರಿಯ ಆರ್ಯಾ: ಗಿಡಮೂಲಿಕೆ ಸಂಶೋಧನಾ ವಿಭಾಗದ ಮುಖ್ಯಸ್ಥರು
4) ಡಾ. ರಾಜೇಶ್ ಮಿಶ್ರಾ: ಆಯುರ್ವೇಧ ಮತ್ತು ಸಂಸ್ಕೃತ ವಿಭಾಗದ ಮುಖಸ್ಥರು
ಅವರ ಮುಂದಿರುವ ಗುರಿಗಳು —
ಆಯುರ್ವೇದ ವಿಧಾನಗಳು ಮತ್ತು ಔಷಧಗಳನ್ನು ಸ್ವಾಭಾವಿಕ ಗುಣಪಡಿಸುವಿಕೆ ಸಾಧನವಾಗಿ ಬಳಸುವುದು
ಭಾರತವನ್ನು ಪ್ರಾಚೀನ ಆಯುರ್ವೇದ ವಿಧಾನಗಳ ಮೇಲೆ ಅವಲಂಬಿತವಾದ ಆಧುನಿಕ ವೈದ್ಯಕೀಯ ಪದ್ಧತಿಗಳ ಕೇಂದ್ರವನ್ನಾಗಿ ರೂಪಿಸಲು ಉತ್ತೇಜಿಸುವುದು
ಆಯುರ್ವೇದವನ್ನು ಇತಿಹಾಸದ ದೃಷ್ಟಿಯಿಂದಷ್ಟೇ ಅಲ್ಲದೆ, ವೈಜ್ಞಾನಿಕವಾಗಿ ಮತ್ತು ಅತ್ಯಮೂಲ್ಯವಾಗಿ ನೆಲೆಗೊಳಿಸುವುದು.
ಪತಂಜಲಿ ಸಂಶೋಧನೆ & ಅಭಿವೃದ್ಧಿ ಪ್ರಯೋಗಾಲಯಗಳು: ಸುರಕ್ಷತೆಗೆ ಮತ್ತೊಂದು ಹೆಸರು
ಪತಂಜಲಿ ಸಂಶೋಧನಾ ಪ್ರತಿಷ್ಠಾನವು ಆಯುರ್ವೇದ ಚಿಕಿತ್ಸಾ ಪದ್ಧತಿಗಳು, ಔಷಧಿಗಳ ಸಂಗ್ರಹ ಮತ್ತು ಅನ್ವೇಷಣೆಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಭಾಗವನ್ನು ಹೊಂದಿದೆ. ಇದು ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಪ್ರಯತ್ನಿಸುತ್ತದೆ.
ಕೆಲಸವನ್ನು ಸರಳಗೊಳಿಸುವ ಸಲುವಾಗಿಯೇ ಈ ವ್ಯವಸ್ಥೆಯಲ್ಲಿ ಹಲವು ಇಲಾಖೆಗಳಿವೆ.
· ಔಷಧ ಅನ್ವೇಷಣೆ ಮತ್ತು ಅಭಿವೃದ್ಧಿ ವಿಭಾಗ: ಆಯುರ್ವೇದ ಔಷಧಗಳು, ಚಿಕಿತ್ಸಾ ವಿಧಾನಗಳಲ್ಲಿ ಹೊಸತನವನ್ನು ತರಲು ಮತ್ತು ಶಾಶ್ವತಗೊಳಿಸುವಿಕೆಯನ್ನು ಪ್ರೋತ್ಸಾಹಿಸುವ ಕೋಶದಂತೆ ಕಾರ್ಯನಿರ್ವಹಿಸುತ್ತದೆ.
· ಗಿಡಮೂಲಿಕೆ ಸಂಶೋಧನಾ ವಿಭಾಗ: ಗಿಡಮೂಲಿಕೆಗಳು ಮತ್ತು ನೈಸರ್ಗಿಕ ಅಂಶಗಳಿಂದ ತಯಾರಾದ ಔಷಧಿಗಳು, ಚಿಕಿತ್ಸಾ ಅಂಶಗಳ ಅಧ್ಯಯನಕ್ಕೆ ಸಮರ್ಪಿತವಾಗಿದೆ. ಇಲ್ಲಿ ಉಲ್ಲೇಖಿಸಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸಲಾದ ಸಂಶೋಧನೆಗಳ ಕುರಿತಾದ ಪುಸ್ತಕಗಳ ಪ್ರಕಾಶಕರಾಗಿಯೂ ಈ ವಿಭಾಗ ಕಾರ್ಯನಿರ್ವಹಿಸುತ್ತದೆ.
· ಕ್ಲಿನಿಕಲ್ ಸಂಶೋಧನಾ ವಿಭಾಗ: ಇದು ಕ್ಲಿನಿಕಲ್ ಪ್ರಯೋಗಗಳನ್ನು ವಿಸ್ತರಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಅಲೋಪತಿ ಮತ್ತು ಆಯುರ್ವೇದ – ಎರಡೂ ವಿಧಾನಗಳನ್ನು ಅನುಸರಿಸುವುದು ಈ ವಿಭಾಗದ ಪ್ರಧಾನ ಆಸಕ್ತಿಯಾಗಿದೆ.
· ವಿಶ್ಲೇಷಣಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ: ವಿಶ್ಲೇಷಣಾತ್ಮಕ ಕೆಲಸಗಳನ್ನು ಆಧರಿಸಿದ ಅಧ್ಯಯನ ಮತ್ತು ಸಂಶೋಧನೆಗಳ ಅಭ್ಯಾಸವನ್ನು ಈ ವಿಭಾಗದಲ್ಲಿ ನಡೆಸಲಾಗುತ್ತದೆ.
· ಇನ್ವಿ-ಟ್ರೋ ಪ್ರಯೋಗಾಲಯ: ಆಯುರ್ವೇದ ಔಷಧಗಳ ಕಾರ್ಯವಿಧಾನಗಳನ್ನು ಗ್ರಹಿಸುವ ಸಲುವಾಗಿ ಇಲ್ಲಿ ಸಿಲಿಕೊ ಮಾದರಿಗಳನ್ನು, ಡಿ ನೊವೊ ಪ್ರಿಡಿಕ್ಷನ್ ಮತ್ತು ಇತರ ಆಣ್ವಿಕ ಜೀವಶಾಸ್ತ್ರ ವಿಧಾನಗಳನ್ನು ಸಂಶೋಧನಾ ಸಾಧನಗಳಾಗಿ ಬಳಸಲಾಗುತ್ತದೆ.
·PORI ಅಥವಾ ಪತಂಜಲಿ ಸಾವಯವ ಸಂಶೋಧನಾ ಸಂಸ್ಥೆ: ಸಮರ್ಥನೀಯ ಕೃಷಿ ಪದ್ಧತಿಗಳಿಗೆ ಈ ವಿಭಾಗವು ಉತ್ತೇಜನ ನೀಡುತ್ತದೆ. ಉದಾಹರಣೆಗೆ ಸಾವಯವ ಪದ್ಧತಿಯು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತದೆ. ಅದೇ ರೀತಿಯು ಪರಿಣಾಮಕಾರಿ ವಿಧಾನಗಳನ್ನು ಪ್ರೋತ್ಸಾಹಿಸುತ್ತದೆ.
· ಪತಂಜಲಿ ಯೋಗ ಪೀಠ: ಈ ವಿಭಾಗವು ಆಯುರ್ವೇದದ ಜೊತೆಗೆ ವೈವಿಧ್ಯಮಯ ಸಂಭಾವ್ಯ ರೋಗಶಾಸ್ತ್ರ, ರೇಡಿಯೊ - ರೋಗನಿರ್ಣಯ, ಸೂಕ್ಷ್ಮ ಜೀವಶಾಸ್ತ್ರಗಳನ್ನೂ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.