‘ಪತಂಜಲಿ’ ಆಯುರ್ವೇದ ಕಂಪನಿಯು ಆರೋಗ್ಯಕ್ಕೆ ಬೇಕಾದ ನೈಸರ್ಗಿಕ ಉತ್ಪನ್ನಗಳನ್ನು ನವೀನ ಸಂಶೋಧನೆಗಳ ಮೂಲಕ ತಯಾರಿಸಿ ಪೂರೈಸುವ ದೇಶದ ಒಂದು ಜನಪ್ರಿಯ ಕಂಪನಿಯಾಗಿದೆ. ಸ್ವಾಮಿ ರಾಮದೇವ ಅವರ ಮುಂದಾಳತ್ವದಲ್ಲಿ ತನ್ನದೇಯಾದ ಸಂಶೋಧನಾ ತಂಡವನ್ನು ಪತಂಜಲಿ ಒಳಗೊಂಡಿದೆ. ಈ ತಂಡವು ಭಾರತದ ಪುರಾತನ ಆಯುರ್ವೇದ ಔಷಧ ಪದ್ದತಿಗಳನ್ನು ಇಂದಿನ ಆಧುನಿಕ ಕಾಲದ ವಿಜ್ಞಾನಕ್ಕೆ ಬೆಸೆಯುತ್ತದೆ.
ಮೂಲ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿ ಪ್ರಯೋಗಾಲಯದಲ್ಲಿ ಹೊಸ ಹೊಸ ತಂತ್ರಜ್ಞಾನದೊಂದಿಗೆ ಸುರಕ್ಷಿತವಾದ ಮತ್ತು ಪರಿಣಾಮಕಾರಿಯಾದ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಪತಂಜಲಿಯ ಸಂಶೋಧನಾ ತಂಡ ಮುಂಚೂಣಿಯಲ್ಲಿದೆ. ಪತಂಜಲಿಯು ವಿಜ್ಞಾನದೊಂದಿಗೆ ಬೆರೆತ ಹಾಗೂ ಸಾಟಿಯಿಲ್ಲದ ನೈಸರ್ಗಿಕ ಔಷದದ ಅನುಭವವನ್ನು ಗ್ರಾಹಕರಿಗೆ ನೀಡುತ್ತದೆ.
ಪತಂಜಲಿಯ ಈ ಸಂಶೋಧನೆಗಳು ಭಾರತದಲ್ಲಿ ಆರೋಗ್ಯ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತಿವೆ. ಇದರೊಂದಿಗೆ ನೈಸರ್ಗಿಕ ಸ್ವಾಸ್ಥ್ಯದ ಸಂದೇಶವನ್ನೂ ಪ್ರಪಂಚದಾದ್ಯಂತ ಹರಡಲಾಗುತ್ತಿದೆ. ಕಂಪನಿಯು ವಿಜ್ಞಾನದ ಜೊತೆ ಜೊತೆಗೆಯೇ ಜನ ಸಮೂಹಕ್ಕೆ ಆಯುರ್ವೇದದ ಪ್ರಯೋಜನಗಳನ್ನು ಪರಿಚಯಿಸುತ್ತಿದೆ. ಎಲ್ಲರೂ ನೈಸರ್ಗಿಕ ಆರೋಗ್ಯ ಹೊಂದುವಲ್ಲಿ ಪತಂಜಲಿಯು ಹೆಚ್ಚು ಸುಲಭವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ.
ಆರೋಗ್ಯ ಕಾಳಜಿಯ ಬಗ್ಗೆ ಜನ ಹೇಗೆ ಚಿಂತಿಸುತ್ತಾರೆ? ಎಂಬುದರ ಮೇಲೆಯೇ ಪತಂಜಲಿಯ ನಾವಿನ್ಯತೆಗಳು ಹಾಗೂ ಸಂಶೋಧನೆಗಳು ತೊಡಗಿಕೊಂಡಿವೆ. ಅಷ್ಟೇ ಅಲ್ಲದೇ ತನ್ನ ನೈಸರ್ಗಿಕ ಉತ್ಪನ್ನಗಳು ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ಎನ್ನುವುದನ್ನು ಕಂಪನಿಯು ಸಾಬೀತುಪಡಿಸುತ್ತದೆ. ಜನರ ವಿಶ್ವಾಸ ಉಳಿಸಿಕೊಳ್ಳುವುದಕ್ಕಾಗಿಯೇ ಪತಂಜಲಿ ಉನ್ನತ ದರ್ಜೆಯ ನೈಸರ್ಗಿಕ ಉತ್ಪನ್ನಗಳನ್ನು ನೀಡುತ್ತದೆ.
ಸಂಸ್ಥೆಯ ಧ್ಯೇಯ ಸ್ಪಷ್ಟವಾಗಿದೆ. ಆರೋಗ್ಯಕಾರಿ ನೈಸರ್ಗಿಕ ಉತ್ಪನ್ನಗಳು ಪ್ರತಿಯೊಬ್ಬರಿಗೂ ದೊರಕಬೇಕೆಂಬುದೇ ಇದರ ಧ್ಯೇಯ. ಸರ್ವರ ಯೋಗಕ್ಷೇಮ ವೃದ್ಧಿ ಹಾಗೂ ಅನಾರೋಗ್ಯವನ್ನು, ಕಾಯಿಲೆಗಳನ್ನು ತಡೆಗಟ್ಟುವುದಕ್ಕಾಗಿಯೇ ಪತಂಜಲಿಯ ಉತ್ಪನ್ನಗಳು ರೂಪುಗೊಂಡಿವೆ. ಪತಂಜಲಿ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅತ್ಯುತ್ತಮ ನೈಸರ್ಗಿಕ ಉತ್ಪನ್ನಗಳೆಂದು ಜನ ನಮ್ಮ ಮೇಲೆ ನಂಬಿಕೆ ಇಡಬಹುದು.
ನೈಸರ್ಗಿಕವಾದ ಔಷಧೀಯ ಶಕ್ತಿಗೆ ಪತಂಜಲಿಯ ಯಶಸ್ಸು ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಆರೋಗ್ಯ ರಕ್ಷಣೆಗೆ ಕಾಲ ಕಾಲಕ್ಕೆ ಕೈಗೊಂಡ ನವ–ನವೀನ ಕ್ರಮಗಳು ಉದ್ಯಮದಲ್ಲಿ ಪತಂಜಲಿಯನ್ನು ನಾಯಕನನ್ನಾಗಿ ಮಾಡಿವೆ. ಪತಂಜಲಿಯ ಬೆಳವಣಿಗೆಯು ನೈಸರ್ಗಿಕ ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿ ಉಳಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.