ಬೆಂಗಳೂರು: ದೇಶದ ಅತ್ಯಂತ ದೊಡ್ಡ ಸರಕು ಸಾಗಣೆ ಟರ್ಮಿನಲ್ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕಾರ್ಯಾರಂಭ ಮಾಡಿದೆ.
‘ಕೆಐಎಎಲ್ ಮತ್ತು ಮೆನ್ಜೀಸ್ ಏವಿಯೇಷನ್‌ನ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಟರ್ಮಿನಲ್, ವಿಮಾನದ ಮೂಲಕ ಸರಕು ಸಾಗಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನೆರವಾಗಲಿದೆ. ಜಾಗತಿಕ ಮಟ್ಟದ ಸರಕು ಸಾಗಣೆ ಕ್ಷೇತ್ರದಲ್ಲಿ ಇದು ಮಹತ್ವದ ಸ್ಥಾನ ಪಡೆಯಲಿದೆ’ ಎಂದು ಕೆಐಎಎಲ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸತ್ಯಕಿ ರಘುನಾಥ್ ಹೇಳಿದರು.
‘ಈ ಟರ್ಮಿನಲ್‌ನ ಮೂಲಕ ವಿಮಾನ ನಿಲ್ದಾಣದ ಸರಕು ಸಾಗಣೆ ಸಾಮರ್ಥ್ಯ ಹೆಚ್ಚಾಗಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 5 ಲಕ್ಷ ಟನ್‌ಗಳಿಗಿಂತಲೂ ಹೆಚ್ಚು ಸರಕು ಸಾಗಣೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದರು.
ಮೆನ್ಜೀಸ್ ಏವಿಯೇಷನ್‌ನ ಏಷ್ಯಾ ವಿಭಾಗದ ಉಪಾಧ್ಯಕ್ಷ ಚಾರ್ಲ್ಸ್ ವೈಲಿ, ‘ಇಂದಿನ ಬೇಡಿಕೆಯ ಪೂರೈಕೆಗಷ್ಟೇ ಅಲ್ಲದೆ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ನೂತನ ಕಾರ್ಗೋ ಟರ್ಮಿನಲ್ ಅನ್ನು ವಿನ್ಯಾಸಗೊಳಿಸಲಾಗಿದೆ. 2029ರ ವೇಳೆಗೆ ವಾರ್ಷಿಕ ಸರಕು ಸಾಗಣೆ ಬೇಡಿಕೆ ಪ್ರಮಾಣವು 5.85 ಲಕ್ಷ ಟನ್ ದಾಟುವ ನಿರೀಕ್ಷೆ ಇದೆ’ ಎಂದರು.
7 ಎಕರೆನೂತನ ಟರ್ಮಿನಲ್ ನಿರ್ಮಾಣಕ್ಕೆ ಬಳಕೆಯಾಗಿರುವ ಪ್ರದೇಶ 2.45 ಲಕ್ಷ ಚದರ ಅಡಿನೂತನ ಸರಕು ಸಾಗಣೆ ಟರ್ಮಿನಲ್‌ನ ಒಟ್ಟು ವಿಸ್ತೀರ್ಣ. ಇದನ್ನು ವಿಸ್ತರಿಸಲು ಅವಕಾಶವಿದೆ 3.60 ಲಕ್ಷ ಟನ್ ಈ ಟರ್ಮಿನಲ್‌ನ ವಾರ್ಷಿಕ ಗರಿಷ್ಠ ಸರಕು ನಿರ್ವಹಣೆ ಸಾಮರ್ಥ್ಯ. ಇದನ್ನು ವಾರ್ಷಿಕ 4 ಲಕ್ಷ ಟನ್‌ವರೆಗೆ ವಿಸ್ತರಿಸಲು ಅವಕಾಶ 42ಟ್ರಕ್ ಡಾಕ್‌ಗಳು 400ಸರಕು ಸಾಗಣೆ ವಿಶೇಷ ಬೋಗಿಗಳು
ಅತ್ಯಾಧುನಿಕ ಸ್ಕ್ಯಾನಿಂಗ್ ಮತ್ತು ಎಕ್ಸ್‌ರೇ ಯಂತ್ರಗಳು
ಏಜೆಂಟರ ಅನುಕೂಲಕ್ಕೆ ಕಿಯೋಸ್ಕ್‌ಗಳು
ಸರಕು ಸಾಗಣೆ ಟ್ರ್ಯಾಕಿಂಗ್ ವ್ಯವಸ್ಥೆ
ಪರಿಸರ ಸ್ನೇಹಿ ವಿನ್ಯಾಸ. ಸುಸ್ಥಿರ ಅಭಿವೃದ್ಧಿಗೆ ಒತ್ತು
ಸೌರ ವಿದ್ಯುತ್ ನೀರಿನ ಮರುಬಳಕೆ ಮಳೆ ನೀರಿನ ಸಂಗ್ರಹ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.