ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಶನಿವಾರ) ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಇದೇ ವೇಳೆ ‘ಮಧುಬನಿ’ ಕಲೆ ಇರುವ ಸೀರೆಯನ್ನು ಧರಿಸಿದ್ದ ಅವರು ಸಂಸತ್ ಭವನದಲ್ಲಿ ಗಮನ ಸೆಳೆದಿದ್ದಾರೆ. ಆ ಮೂಲಕ ಅವರು ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಪ್ರತಿವರ್ಷ ನಿರ್ಮಲಾ ಅವರು ಮಂಡಿರುವ ಬಜೆಟ್ ಜತೆಗೆ ಅವರ ಸೀರೆಯೂ ಗಮನ ಸೆಳೆಯುತ್ತದೆ. ಕಳೆದ 7 ಬಾರಿ ಭಾರತೀಯ ಕೈಮಗ್ಗದ ಸೀರೆಗಳನ್ನು ಅವರು ಧರಿಸಿದ್ದರು.
ನಿರ್ಮಲಾ ಸೀತಾರಾಮನ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಅವರು ಇಂದು (ಶನಿವಾರ) ಮಂಡಿಸಿದ್ದಾರೆ. ಇದೇ ವೇಳೆ ‘ಮಧುಬನಿ’ ಕಲೆ ಇರುವ ಸೀರೆಯನ್ನು ಧರಿಸಿದ್ದ ಅವರು ಸಂಸತ್ ಭವನದಲ್ಲಿ ಗಮನ ಸೆಳೆದಿದ್ದಾರೆ.
2024–25ರ ಬಜೆಟ್ ವೇಳೆ ನಿರ್ಮಲಾ ಅವರು ನೇರಳೆ ಅಂಚುಗಳಿಂದ ಅಲಂಕರಿಸಲ್ಪಟ್ಟ ಆಫ್–ವೈಟ್ ರೇಷ್ಮೆ ಸೀರೆಯನ್ನು ಅವರು ಧರಿಸಿದ್ದರು.
2024ರ ಮಧ್ಯಂತರ ಬಜೆಟ್ ವೇಳೆ ನಿರ್ಮಲಾ ಅವರು ಪಶ್ಚಿಮ ಬಂಗಾಳದ ಕೈಮಗ್ಗ ಸೀರೆಯಾದ ಕಾಂತ ಕಸೂತಿಯಿಂದ ಅಲಂಕರಿಸಲ್ಪಟ್ಟ ನೀಲಿ ಬಣ್ಣದ ಸಿಲ್ಕ್ ಸೀರೆ ಧರಿಸಿದ್ದರು.
2023ರ ಬಜೆಟ್ ವೇಳೆ ನಿರ್ಮಲಾ ಅವರು ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು.
2022ರ ಬಜೆಟ್ ವೇಳೆ ನಿರ್ಮಲಾ ಅವರು ಬೊಮ್‌ಕೈ ಸೀರೆಯನ್ನು ಧರಿಸಿ ಗಮನ ಸೆಳೆದಿದ್ದರು.
2021ರ ಬಜೆಟ್ ದಿನದಂದು ನಿರ್ಮಲಾ ಅವರು ಇಕ್ಕಟ್ ಶೈಲಿಯ ಆಫ್–ವೈಟ್ ಪೋಚಂಪಲ್ಲಿ ರೇಷ್ಮೆ ಸೀರೆ ಧರಿಸಿದ್ದರು.
2020ರ ಬಜೆಟ್ ದಿನದಂದು ನಿರ್ಮಲಾ ಅವರು ಹಳದಿ ಬಣ್ಣದ ರೇಷ್ಮೆ ಸೀರೆ ಧರಿಸಿದ್ದರು.
2019ರ ಮೊದಲ ಬಜೆಟ್ ಮಂಡನೆ ವೇಳೆ ನಿರ್ಮಲಾ ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆ ಧರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.