ನವದೆಹಲಿ: ದೇಶದ ರಕ್ಷಣಾ ವಲಯಕ್ಕೆ 2025–2026ನೇ ಸಾಲಿನಲ್ಲಿ ₹6,81,210 ಕೋಟಿ ಮೀಸಲಿಟ್ಟಿರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2025–26ನೇ ಸಾಲಿನ ಬಜೆಟ್ ಅನ್ನು ಅವರು ಇಂದು(ಶನಿವಾರ) ಮಂಡಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ರಕ್ಷಣಾ ವಲಯಕ್ಕೆ ಅನುದಾನವನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ ರಕ್ಷಣಾ ವಲಯಕ್ಕೆ ₹6,21,940 ಕೋಟಿ ಮೀಸಲಿಡಲಾಗಿತ್ತು.
ಇನ್ನು, ಬಂಡವಾಳ ವೆಚ್ಚಕ್ಕಾಗಿ 1,92,387 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ವಿಮಾನ ಮತ್ತು ಏರೋ ಎಂಜಿನ್‌ಗಳಿಗೆ ₹48,614 ಮೀಸಲಿಟ್ಟರೆ, ನೌಕಾಪಡೆಗೆ ₹24,390 ಕೋಟಿ ಮೀಸಲಿಡಲಾಗಿದೆ.
ಕಳೆದ ವರ್ಷ ಬಂಡವಾಳ ವೆಚ್ಚಕ್ಕಾಗಿ ₹1,72,000 ಕೋಟಿ ಮೀಸಲಿಡಲಾಗಿತ್ತು.
ವೇತನ ಪಾವತಿ ಮತ್ತು ನಿರ್ವಹಣೆ ವೆಚ್ಚಕ್ಕಾಗಿ ₹4,88,822 ಕೋಟಿ ಇಡಲಾಗಿದೆ. ರಕ್ಷಣಾ ಪಿಂಚಣಿಗಾಗಿ ₹1,60,795 ಕೋಟಿ ಮೀಸಲಿಡಲಾಗಿದೆ.
ಇತರ ಉಪಕರಣಗಳ ಖರೀದಿಗಾಗಿ ₹63,099 ಕೋಟಿ ಮೀಸಲಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.