
ಪಿಟಿಐ
ನವದೆಹಲಿ: ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಗಡುವನ್ನು ಡಿಸೆಂಬರ್ 31ರ ಬದಲು ಮಾರ್ಚ್ 31ರವರೆಗೆ ವಿಸ್ತರಿಸುವ ಘೋಷಣೆಯನ್ನು ಬಜೆಟ್ ಮೂಲಕ ಮಾಡಲಾಗಿದೆ.
ವಿದೇಶ ಪ್ರವಾಸದ ಪ್ಯಾಕೇಜ್‌ಗಳ ಮೇಲೆ ವಿಧಿಸಲಾಗುವ ಮೂಲದಲ್ಲೇ ತೆರಿಗೆ ಸಂಗ್ರಹವನ್ನು (ಟಿಸಿಎಸ್) ಶೇ 5ರಿಂದ ಶೇ 2ಕ್ಕೆ ಇಳಿಕೆ ಮಾಡಲಾಗಿದೆ. ಈ ಮೊದಲು ಇದು ಶೇ 20ರಷ್ಟಿತ್ತು.
ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಟಿಸಿಎಸ್ ದರವನ್ನು ಉದಾರೀಕೃತ ಹಣ ವರ್ಗಾವಣೆ (ಎಲ್‌ಆರ್‌ಎಸ್) ಯೋಜನೆಯ ಅಡಿ ಶೇ 5ರಿಂದ ಶೇ 2ಕ್ಕೆ ಇಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.