ADVERTISEMENT

ಬಜೆಟ್ ಮಂಡನೆ ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2022, 12:32 IST
Last Updated 1 ಫೆಬ್ರುವರಿ 2022, 12:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: 'ರೈತರ ಆತ್ಮಹತ್ಯೆಗಳು ಗಣನೀಯವಾಗಿ ಹೆಚ್ಚುತ್ತಿದೆ. ನೆರೆ, ಬರಗಳಂತಹ ಪ್ರಕೃತಿ ವಿಕೋಪಗಳಿಂದ ನಷ್ಟ ಅನುಭವಿಸಿದ ರೈತರಿಗೆ ಸ್ಥೈರ್ಯ ತುಂಬುವಂತಹ ಯೋಜನೆಗಳು ಅಗತ್ಯವಿದ್ದವು. ರೈತರ ಬಗೆಗೆ ಕಿಂಚಿತ್ತೂ ಯೋಚಿಸದೆ, ಬಜೆಟ್‌ನಲ್ಲಿ ನಿರ್ಲಕ್ಷಿಸುವ ಮೂಲಕ ರೈತರ ಪ್ರತಿಭಟನೆಗೆ ಪ್ರತೀಕಾರ ತೀರಿಸಿಕೊಂಡಿದೆಯೇ ಮೋದಿ ಸರ್ಕಾರ?' ಎಂದು ಕರ್ನಾಟಕ ಕಾಂಗ್ರೆಸ್ ಕೇಂದ್ರದ ಬಜೆಟ್ ವಿರುದ್ಧ ಕಿಡಿಕಾರಿದೆ.

#UnionBudget2022 ಮೂಲಕ ಟ್ವೀಟ್ ಮಾಡಿದ್ದು, 'ಲಾಕ್‌ಡೌನ್‌ನಿಂದ ಆಗಿರುವ ಆರ್ಥಿಕ ಹಿನ್ನೆಡೆಯನ್ನು ಸರಿದೂಗಿಸಲು ಯಾವುದೇ ಯೋಜನೆಗಳು ಈ ಬಜೆಟ್‌ನಲ್ಲಿಲ್ಲ. ಆರ್ಥಿಕ ಚಟುವಟಿಕೆಗಳ ವೃದ್ಧಿಗೆ, ಬಡ, ಮದ್ಯಮವರ್ಗದ ಜನರ ತೆರಿಗೆಯ ಹೊರೆ ಇಳಿಸುವ ನಿರೀಕ್ಷೆಯನ್ನು ಸರ್ಕಾರ ಹುಸಿ ಮಾಡಿದೆ. ಯುವ ಜನತೆ ಭವಿಷ್ಯದ ಕನಸು ಕಾಣುವ ಯಾವುದೇ ಸಕಾರಾತ್ಮಕ ಅಂಶಗಳು ಈ ಬಜೆಟ್‌ನಲ್ಲಿಲ್ಲ' ಎಂದು ದೂರಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಕೇಂದ್ರದ ಬಜೆಟ್ ಮಂಡನೆ ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ!. ಕೇವಲ ಒಂದೂವರೆ ಗಂಟೆಯಲ್ಲೇ ಮುಗಿದುಹೋದ ಬಜೆಟ್ ಭಾಷಣವೇ ಇದಕ್ಕೆ ಸಾಕ್ಷಿ. ಜನರ ಸುಲಿಗೆ ಮಾಡಿ ಜಿಎಸ್‌ಟಿ ತೆರಿಗೆ ಸಂಗ್ರಹಿಸಿದ್ದನ್ನೇ ಹೆಗ್ಗಳಿಕೆ ಎಂಬಂತೆ ಹೇಳಿಕೊಳ್ಳಲು ಮಾತ್ರ ಈ ಬಜೆಟ್ ಭಾಷಣ ಸೀಮಿತವಾಗಿದೆ' ಎಂದು ಆರೋಪಿಸಿದೆ.

ADVERTISEMENT

ಇವುಗಳನ್ನು ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.