ADVERTISEMENT

ಭಾರತದ ಭವಿಷ್ಯ ನಿರ್ಧರಿಸುವಲ್ಲಿ ಬಜೆಟ್ ಅಧಿವೇಶನ ಮಹತ್ವದ್ದಾಗಿದೆ: ಪ್ರಧಾನಿ ಮೋದಿ

ಪಿಟಿಐ
Published 29 ಜನವರಿ 2021, 7:45 IST
Last Updated 29 ಜನವರಿ 2021, 7:45 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಈ ದಶಕದ ಮೊದಲ ಬಜೆಟ್ ಅಧಿವೇಶನ ಶುಕ್ರವಾರ ಆರಂಭವಾಗಲಿದೆ. ಇದು, ಭಾರತದ ಭವಿಷ್ಯ ನಿರ್ಧರಿಸುವಲ್ಲಿ ಮಹತ್ವದ್ದಾಗಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಸಂಸತ್ತಿನ ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಪ್ರಧಾನಿ, ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ನೇ ವರ್ಷದಲ್ಲಿ ಪ್ಯಾಕೆಜ್‌ ಸ್ವರೂಪದಲ್ಲಿ ನಾಲ್ಕು– ಐದು ಮಿನಿ ಬಜೆಟ್ ನೀಡಿದ್ದಾರೆ. ಮುಂದೆ ಮಂಡಿಸಲಿರುವ ಬಜೆಟ್‌ ಕೂಡಾ ಈ ಸರಣಿಯ ಭಾಗವಾಗಿರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ದಶಕವನ್ನು ಗಮನದಲ್ಲಿ ಇಟ್ಟುಕೊಂಡು ಭಿನ್ನ ಕಲಾಪಗಳಲ್ಲಿ ಚರ್ಚೆ, ಪ್ರಸ್ತಾವಗಳು ಇರಲಿವೆ. ಜನರ ಆಶೋತ್ತರಗಳ ಈಡೇರಿಕೆಗೆ ಸಂಸದರು ಈ ಅಧಿವೇಶನವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು ಎಂದೂ ಸಲಹೆ ಮಾಡಿದರು.

ADVERTISEMENT

ಬಹುಶಃ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಣಕಾಸು ಸಚಿವರು 2020ರ ಸಾಲಿನಲ್ಲಿ 4–5 ಮಿನಿ ಬಜೆಟ್‌ಗಳನ್ನು ನೀಡಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.